ಕರ್ನಾಟಕಪ್ರಮುಖ ಸುದ್ದಿ

ಶ್ರೀ ರಾಮರಥಯಾತ್ರೆಗೆ ಬಿಎಸ್ ವೈ ಯನ್ನು ಆಹ್ವಾನ ಮಾಡಿದ ಕಂದಾಯ ಸಚಿವ ಆರ್.ಅಶೋಕ್

ರಾಜ್ಯ(ಬೆಂಗಳೂರು),ಏ.8 :-  ಕಂದಾಯ ಸಚಿವ ಆರ್.ಅಶೋಕ್ ಮಾಜಿ ಸಿಎಂ ಯಡಿಯೂರಪ್ಪ ನವರನ್ನು ಭೇಟಿಯಾಗಿದ್ದು, ಶ್ರೀರಾಮ ರಥಯಾತ್ರೆಗೆ ಆಹ್ವಾನ ನೀಡಿದ್ದಾರೆ.

ಏಪ್ರಿಲ್ 10 ರಂದು ಪದ್ಮನಾಭನಗರದಲ್ಲಿ ಶ್ರೀರಾಮ ರಥಯಾತ್ರೆ ಜರುಗಲಿದ್ದು, ಯಡಿಯೂರಪ್ಪ ನವರ ನಿವಾಸಕ್ಕೆ ಕಂದಾಯ ಸಚಿವ ಆರ್.ಅಶೋಕ್ ರಥಯಾತ್ರೆಗೆ ಆಹ್ವಾನ ನೀಡಿದ್ದಾರೆ.

ರಾಮನವಮಿ ಅಂಗವಾಗಿ ಶ್ರೀರಾಮ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಜನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ 5 ಗಂಟೆಗೆ ಪದ್ಮನಾಭನಗರದಲ್ಲಿ ಜಾತ್ರೆಗೆ ಚಾಲನೆ ಸಿಗಲಿದ್ದು, ಕಂದಾಯ ಸಚಿವ ಆರ್.ಅಶೋಕ್ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.(ಎಸ್.ಎಂ)

Leave a Reply

comments

Related Articles

error: