ಪ್ರಮುಖ ಸುದ್ದಿಮೈಸೂರು

ಚಾಕು ಇರಿತ ಪ್ರಕರಣ: ಆರೋಪಿಗಳು ಅಂದರ್

ಮೈಸೂರು, ಮೇ11: ಹಾರ್ಡಿಂಗ್ ವೃತ್ತದಲ್ಲಿ  ಚಾಕು ಇರಿತ ಪ್ರಕರಣದ ಹಿನ್ನೆಲೆ ಚಾಕು ಇರಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ದೀಪಕ್,ಶ್ರೀಧರ್,ಶ್ರೀನಿವಾಸ್,ಮಹೇಶ್,ಪ್ರದೀಪ್ ಬಂಧಿತರು. ಹಣಕಾಸಿನ ವಿಚಾರವಾಗಿ ಹಾರ್ಡಿಂಗ್  ವೃತ್ತದಲ್ಲಿ ಮಹದೇವು ಎಂಬುವವರಿಗೆ ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ. ಆಲನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಶೇಖರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಬಂಧಿತ ಐವರು ಅಡಿಗೆ ಕೆಲಸಗಾರರು ಎಂದು ತಿಳಿದು ಬಂದಿದೆ. ಸದ್ಯ ಚಾಕು ಇರಿತಕ್ಕೆ ಒಳಗಾಗಿದ್ದ ಮಹದೇವು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ವರದಿ: ಎಸ್.ಎನ್.ಎಲ್.ಜಿ)

Leave a Reply

comments

Related Articles

error: