ಮೈಸೂರು

ವರದಕ್ಷಿಣೆ ಕಿರುಕುಳ ಆರೋಪ: ಪತಿಯ ವಿರುದ್ಧ ದೂರು

ಮೈಸೂರು, ಮೇ 11: ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಅಫ್ರಿನ್ ತಾಜ್ ಎಂಬುವರು ತನ್ನ ಪತಿ ಮೇಲೆ  ದೂರು ದಾಖಲಿಸಿದ್ದಾರೆ.
ಪತಿ ಸಲ್ಮಾನ್ ಅಹಮದ್ ಹಾಗೂ ಅತ್ತೆ ಗುಲ್ ನವಾಜ್ ಬಾನು,ನಾದಿನಿ ಅಮ್ರಿನ್ ತಾಜ್ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಾಂತಿನಗರ ನಿವಾಸಿಯಾದ ಅಫ್ರಿನ್ ತಾಜ್ ನಾಲ್ಕು ತಿಂಗಳ ಹಿಂದೆ ಉದಯಗಿರಿಯ ಸಲ್ಮಾನ್ ಅಹಮದ್ ನನ್ನು ವಿವಾಹವಾಗಿದ್ದಳು. ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿತ್ತು. ಮದುವೆ ನಂತರ ಪತ್ನಿಯನ್ನು ದಪ್ಪ ಎಂದು ಹೀಯಾಳಿಸಿದ್ದ ಸಲ್ಮಾನ್ ಅಹಮದ್, ೧೦ ಸಾವಿರ ವರದಕ್ಷಿಣೆ ಬೇಕೆಂದು ಒತ್ತಾಯಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದ ಎನ್ನಲಾಗಿದೆ.
ಇದರಿಂದ  ಅಫ್ರಿನ್ ತಾಜ್(18)ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದಳು. ವರದಕ್ಷಿಣೆ ಕಿರುಕುಳಕ್ಕೆ ಅತ್ತೆ ಹಾಗೂ ನಾದಿನಿ ಸಹ ಬೆಂಬಲಿಸಿದ್ದರು. ಇದರಿಂದ ಮನನೊಂದ ಅಫ್ರೀನ್ ತಾಜ್ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಉದಯಗಿರಿ ಪೊಲೀಸ್ ಠಾಣೆಯ ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ಮಾಹಿತಿ ಬಂದಿದೆ.(ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: