ಕರ್ನಾಟಕಪ್ರಮುಖ ಸುದ್ದಿಮನರಂಜನೆ

‘ತಾಯ್ತ’ ಸಿನಿಮಾದ ಮೂಲಕ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿರುವ ಹರ್ಷಿಕಾ ಪೂಣಚ್ಚ

ರಾಜ್ಯ(ಬೆಂಗಳೂರು),ಏ.13 :- ಸ್ಯಾಂಡಲ್‌ ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಸದ್ಯದ ಕನ್ನಡದ ಬ್ಯುಸಿ ನಟಿಯಾಗಿದ್ದಾರೆ. ಬಹುಭಾಷಾ ಚಿತ್ರಗಳಲ್ಲಿ ಮಿಂಚ್ತಿರೋ ಪ್ರತಿಭೆ, ಇದೀಗ ಕನ್ನಡದ `ತಾಯ್ತ’  ಚಿತ್ರದ ಮೂಲಕ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಫೋಟೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದಾರೆ.

ಕನ್ನಡ ಸಿನಿಮಾಗಳ ಜೊತೆಗೆ ಪರಭಾಷಾ ಚಿತ್ರಗಳಲ್ಲಿ ಆಕ್ಟೀವ್ ಆಗಿರೋ ನಟಿ ಹರ್ಷಿಕಾ, ಇತ್ತೀಚೆಗೆ ಭೋಜಪುರಿ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಈಗ ಕನ್ನಡದ `ತಾಯ್ತ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಕನ್ನಡದ ಜನಪ್ರಿಯ ಹಾಸ್ಯನಟ ಸಾಧುಕೋಕಿಲ ಅವರ ಸಹೋದರ ಲಯಕೋಕಿಲ ನಿರ್ದೇಶನದಲ್ಲಿ `ತಾಯ್ತ’  ಚಿತ್ರ ಮೂಡಿ ಬಂದಿದ್ದು. ಪವರ್‌ಫುಲ್ ಪಾತ್ರದ ಜೊತೆ ಡಿಫರೆಂಟ್ ಶೇಡ್‌ ನಲ್ಲಿ ಹರ್ಷಿಕಾ ಕಾಣಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಹಾಡಿನ ಚಿತ್ರೀಕರಣದ ಫೋಟೋ ಶೇರ್ ಮಾಡಿದ್ದು ಈ ಫೋಟೋ ವೈರಲ್ ಆಗ್ತಿದೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ.

ಶಾಹಿದ್ ನಿರ್ಮಾಣದಲ್ಲಿ ಮೂಡಿ ಬಂದಿರೋ `ತಾಯ್ತ’ ಚಿತ್ರದಲ್ಲಿ ನವ ನಟ ರಿಹಾನ್‌ ಗೆ ಜೋಡಿಯಾಗಿ ನಟಿ ಹರ್ಷಿಕಾ ನಟಿಸಿದ್ದಾರೆ. ಸದ್ಯದಲ್ಲೇ `ತಾಯ್ತ’ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕನ್ನಡ ಚಿತ್ರಗಳ ಜೊತೆಗೆ ಪರಭಾಷಾ ಚಿತ್ರಗಳಲ್ಲೂ ನಟಿಸುತ್ತಿರುವ ಹರ್ಷಿಕಾ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ.(ಎಸ್.ಎಂ)

Leave a Reply

comments

Related Articles

error: