ಮೈಸೂರು

ವಿಕಲಚೇತನ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಕಾಣಬೇಕು: ಕಳಲೆ ಎನ್.ಕೇಶವಮೂರ್ತಿ

ಮೈಸೂರು, ಮೇ 12 : ಸಮಾಜದಲ್ಲಿ ವಿಕಲಚೇತನ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಕಾಣಬೇಕು ಎಂದು ಶಾಸಕ ಕಳಲೆ.ಎನ್.ಕೇಶವಮೂರ್ತಿ ನೆರೆದ ಪೋಷಕರಿಗೆ ತಿಳಿಸಿದರು.
ನಂಜನಗೂಡಿನ ಶ್ರೀ ಗಿರಿಜಾಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ತಾಲೂಕಿನ ಸುಮಾರು 216 ಮಕ್ಕಳಿಗೆ ವಿವಿಧ ವಿಕಲಚೇತನ ಸಾಧನ ಸಲಕರಣೆಗಳ ವಿತರಣಾ ಸಮಾರಂಭದ ಜ್ಯೋತಿ ಬೆಳಗಿಸಿ ಮತ್ತು ಸಾಧನ ಸಲಕಣೆಗಳನ್ನು ವಿತರಿಸಿ ಮಾತನಾಡಿದರು.

ಇಂದು ವಿಕಲಚೇತನ ಮಕ್ಕಳನ್ನು ಶಾಲೆಯಲ್ಲಿ ಶಿಕ್ಷಕರು ಪ್ರತ್ಯೇಕವಾಗಿ ಕಾಣದೆ ಇತರೆ ಸಾಮಾನ್ಯ ಮಕ್ಕಳ ಜೊತೆ ಬೆರೆಯುವುದಕ್ಕೆ ಬಿಟ್ಟು ಅವರು ಸಹ ಕಲಿಯಲು ಸಹಕರಿಸಿ ಎಂದು ಶಿಕ್ಷಕರಿಗೆ ಕಿವಿ ಮಾತನ್ನು ಹೇಳಿದರು. ತಾಲೂಕಿನಿಂದ ವಿಕಲಚೇತನ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಾದ ದೃಷ್ಟಿದೋಷ, ಭಾಗಶಃ ದೃಷ್ಟಿದೋಷ,  ಶ್ರವಣದೋಷ  ಚಲನಾದೋಷ, ಮಾತಿನ ದೋಷ,  ಬುದ್ದಿಮಾಂಧ್ಯತೆ,  ಬಹುವಿಕಲರು,  ಕಲಿಕಾ ನ್ಯೂನ್ಯತೆ ,  ಮೆದುಳುವಾತ,  ಆಟಿಸಂ ಮಕ್ಕಳಿಗೆ ಸಾಧನ ಸಲಕರಣೆ , ವಿದ್ಯಾರ್ಥಿ ವೇತನ ಸಮಾಜ ಕಲ್ಯಾಣ ಇಲಾಖೆಯಿಂದಲೂ ಸಹಕಾರ ಪಡೆಯಬಹುದು ಎಂದು ವಿವರಿಸಿದರು.

ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನ ಶಾಸಕರಾದ ಕಳಲೆ.ಎನ್.ಕೇಶವಮೂರ್ತಿ ಅವರಿಗೆ ಸಂಘದ ಅಧ್ಯಕ್ಷ ಮುದ್ದು ಮಾದೇಗೌಡ, ಪ್ರಧಾನ ಕಾರ್ಯದರ್ಶಿ ಹಾಗೂ ಬಿ.ಇ.ಒ ನಾರಾಯಣ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಮಾತನಾಡಿ ತಾಲೂಕಿನ ಗುರು ಭವನ ಶಿಥಿಲವಾಗಿದ್ದು ಅದರ ದುರಸ್ಥಿತಿಗೆ ತಮ್ಮ ಕಡೆಯಿಂದ ಅನುದಾನ ನೀಡುವ  ಮನವಿ ನೀಡಿದರು. ಇದಕ್ಕೆ ಮಾನ್ಯ ಶಾಸಕರು ಅನುದಾನ ನೀಡುವುದಾಗಿ ಭರವಸೆ ನೀಡಿದರು ಜೊತೆಗೆ ಹೊಸದಾಗಿ ನಿರ್ಮಿಸುವ ಅಥವಾ ದುರಸ್ತಿಮಾಡುವ ಬಗ್ಗೆ ಸಂಘದೊಡನೆ ಚರ್ಚಿಸುವುದಾಗಿ ಶಾಸಕರು ಅಧ್ಯಕ್ಷರಿಗೆ ಹಾಗೂ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು. (ವರದಿ: ಎಸ್.ಎನ್,ಎಲ್.ಜಿ)

Leave a Reply

comments

Related Articles

error: