ಕರ್ನಾಟಕಪ್ರಮುಖ ಸುದ್ದಿ

ಸಿಎಂ ಬೊಮ್ಮಾಯಿ ಭ್ರಷ್ಟಾಚಾರ ಗಂಗೋತ್ರಿಯ ಅಧ್ಯಕ್ಷರಾಗಿದ್ದಾರೆ ; ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಜ್ಯ(ಬೆಂಗಳೂರು),ಏ.14 : ರಾಜ್ಯದ ಅತೀ ಭ್ರಷ್ಟಾಚಾರ ಸರ್ಕಾರವೆಂದರೆ ಅದು ಬಿಜೆಪಿ ಸರ್ಕಾರವಾಗಿದೆ.  ಸಿಎಂ ಬಸವರಾಜ ಬೊಮ್ಮಾಯಿ  ಭ್ರಷ್ಟಾಚಾರ ಗಂಗೋತ್ರಿ ಅಧ್ಯಕ್ಷರಾಗಿದ್ದಾರೆ. ಅದಕ್ಕೆ ಈಶ್ವರಪ್ಪ ಅವರನ್ನು ರಕ್ಷಣೆ ಮಾಡುತ್ತಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಈಶ್ವರಪ್ಪ ಅವರನ್ನು ಬಂಧನ ಮಾಡಲೇಬೇಕು.  ಕಾನೂನಿನ ಪ್ರಕಾರ ಇದು ನಾನ್ ಬೇಲಬಲ್ ಕೇಸ್ ಆಗಿದೆ. 302, 306 ಎಲ್ಲವೂ ನಾನ್​ ಬೇಲಬಲ್ ಕೇಸ್ . ಪ್ರವೆನ್ಟೀವ್ ಕರೆಪ್ಷನ್ ಆಕ್ಟ್ ಆದ್ದರಿಂದ ಈಶ್ವರಪ್ಪ ನವರನ್ನು ಕೂಡಲೇ ಬಂಧಿಸಬೇಕು. ಆದ್ರೆ ಸಿಎಂ ಬೊಮ್ಮಾಯಿ ಅವರನ್ನ ರಕ್ಣಣೆ ಮಾಡುತ್ತಿದ್ದಾರೆ.ಇಂದು ಅವರನ್ನು ಬಂಧನ ಮಾಡಬೇಕೆಂದು. ಮಾಡದಿದ್ದರೆ,  24 ಗಂಟೆ ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿ ಮಾಡುತ್ತೇವೆ. ಕಾನೂನು ಪ್ರಕಾರ ಬಂಧನ ಮಾಡಬೇಕೆಂದುಒತ್ತಾಯ ಮಾಡುತ್ತೇವೆ. ಏಪ್ರಿಲ್​ 16-21ರ ವರೆಗೂ ಏಳು ತಂಡ ಮಾಡಿಕೊಂಡು, ಐದು ದಿನಗಳ ಕಾಲ ಎಲ್ಲಾ ಜಿಲ್ಲೆಗಳಲ್ಲಿ ಧರಣಿ ಮಾಡುತ್ತೇವೆ ಎಂದು ಹೇಳಿದ್ದಾರೆ.

40% ಸರ್ಕಾರ ಅಂತ ಯಾರೂ ಹೇಳಿರಲಿಲ್ಲ ಕಂಟ್ರಾಕ್ಟರ್ ಹೇಳಿದ್ದಾರೆ, ಆತ್ಮಹತ್ಯೆ ಮಾಡಿಕೊಂಡವನೂ ಹೇಳಿದ್ದಾನೆ. ಕರೆಪ್ಷನ್ ಆಕ್ಟ್ ಅಡಿಯಲ್ಲಿ ಈಶ್ವರಪ್ಪನನ್ನ ಬಂಧನ ಮಾಡಬೇಕು, ಸಚಿವ ಸ್ಥಾನದಿಂದ ಕೈಬಿಡಬೇಕು. 40% ಕಮಿಷನ್ ಕೊಡಲು ಆಗದೆ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: