ಕರ್ನಾಟಕಪ್ರಮುಖ ಸುದ್ದಿ

ಎಂದಿನಂತೆ ಪೂಜಾಕೈಂಕರ್ಯ ನೆರವೇರಿಸಿದ ಸಿದ್ದಗಂಗಾ ಶ್ರೀಗಳು

ರಾಜ್ಯ, (ತುಮಕೂರು) ಮೇ.12:-    ನಡೆದಾಡುವ ದೇವರು ಎಂದೇ ಗುರುತಿಸಿಕೊಂಡಿರುವ ತುಮಕೂರಿನ ಸಿದ್ದಗಂಗಾಮಠದ  ಶಿವಕುಮಾರಸ್ವಾಮೀಜಿಯವರ ಆರೋಗ್ಯದಲ್ಲಿ  ಗುರುವಾರ ಏರುಪೇರು ಕಂಡು ಬಂದಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಶ್ರೀಗಳು ಎಂದಿನಂತೆ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಎದ್ದು ಶಿವಪೂಜೆ ಮಾಡಿದ್ದಾರೆ. ರಾತ್ರಿ ಲಘು ಆಹಾರ ಸೇವಿಸಿದ ಶ್ರೀಗಳನ್ನು  ಬೆಳಗ್ಗೆ 10 ಗಂಟೆಗೆ ವೈದ್ಯರ ತಂಡ ಇನ್ನೊಮ್ಮೆ ತಪಾಸಣೆ ನಡೆಸಿದೆ.
ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ, ಸೊಗಡು ಶಿವಣ್ಣ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು. ಸ್ವಲ್ಪ ಸಮಯದಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಗೆ ಶ್ರೀಗಳನ್ನು  ಕರೆದೊಯ್ಯಲಾಗುವುದು ಎಂದು ಮಠದ ಮೂಲಗಳು  ಮಾಹಿತಿ ನೀಡಿವೆ.

ಶ್ರೀಗಳು ಆರೋಗ್ಯವಾಗಿದ್ದಾರೆ. ಬೆಳಗ್ಗೆ ಇಷ್ಟಲಿಂಗ ಪೂಜೆ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ. 9 ಗಂಟೆಗೆ ಶ್ರೀಗಳನ್ನು ಬಿಜಿಎಸ್ ಆಸ್ಪತ್ರೆ ಗೆ ಕರೆದೊಯ್ಯಲಾಗುವುದು. ಬಿಜಿಎಸ್ ಆಸ್ಪತ್ರೆಗೆ ಸುತ್ತೂರು ಶ್ತೀಗಳೂ ಆಗಮಿಸಲಿದ್ದಾರೆ. ಕಳೆದ ಬಾರಿ ಶ್ರೀಗಳಿಗೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡ ಇಂದು ಕೂಡಾ ಚಿಕಿತ್ಸೆ ನೀಡಲಿದೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: