ಮೈಸೂರು

ಟಿಕೇಟ್ ಕೌಂಟರ್ ಗೆ ಬೆಂಕಿ ಬಿದ್ದ ಪ್ರಕರಣ :ಇನ್ನೊಂದು ಕೌಂಟರ್ ಓಪನ್

ಮೈಸೂರು, ಮೇ.12:-  ಮೈಸೂರು ಅರಮನೆಯ ವರಾಹ ದ್ವಾರದ ಬಳಿ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಬ್ಬಂದಿಗಳು ಬೆಂಕಿ ಬಿದ್ದ ಸ್ಥಳವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಒಂದು ಟಿಕೇಟ್  ಕೌಂಟರ್ ಗೆ ಬೆಂಕಿ ಬಿದ್ದಿರುವ ಹಿನ್ನೆಲೆಯಲ್ಲಿ ಮತ್ತೊಂದು ಟಿಕೇಟ್  ಕೌಂಟರ್ ಮೂಲಕ ಪ್ರವಾಸಿಗರಿಗೆ ಟಿಕೇಟ್ ವಿತರಣೆ ಮಾಡಲು ಅರಮನೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ ಎಂದು ತಿಳಿದು ಬಂದಿದೆ. – (ವರದಿ:ಕೆ.ಎಸ್, ಎಸ್.ಎಚ್)

Leave a Reply

comments

Related Articles

error: