ಕರ್ನಾಟಕಪ್ರಮುಖ ಸುದ್ದಿ

ಸಚಿವ ಪ್ರಭು ಚವ್ಹಾಣ್ ಏಕಾಏಕಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆಗೆ ಭೇಟಿ : ಅಧಿಕಾರಿಗಳಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸೂಚನೆ

ರಾಜ್ಯ(ಯಾದಗಿರಿ),ಏ.16 : ಪಶುಸಂಗೋಪನೆ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ಅವರು ಏಕಾಏಕಿ ಯಾದಗಿರಿಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಅವ್ಯವ್ಯಸ್ಥೆಯನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲರಾಗಿದ್ದಾರೆ.

ಸಚಿವ ಪ್ರಭು ಚವ್ಹಾಣ್​ ರವರು ಯಾದಗಿರಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಬಸ್ ನಿಲ್ದಾಣದಲ್ಲಿರುವ ಕಸದ ರಾಶಿಯನ್ನ ಕಂಡು  ಬಸ್ ಡಿಪೋ ಮ್ಯಾನೇಜರ್ ವಿನೋದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಏನ ಮಾಡ್ತಾ ಇದೀರಾ  ಇಲ್ಲಿ ಕಸದ ರಾಶಿಯಿದೆ. ನೀವು ಸ್ವಚ್ಚತೆ ಮಾಡಿಸಲು ಆಗುವುದಿಲ್ಲವ ಎಂದು ಅಧಿಕಾರಿ ವಿನೋದಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ತದನಂತರ ಮಧ್ಯಾಹ್ನದೊಳಗೆ ಕಸದ ರಾಶಿಯನ್ನು ತೆಗೆದು ಸ್ವಚ್ಚತೆ ಮಾಡಿಸಬೇಕೆಂದು ಅಧಿಕಾರಿಗೆ ಗಡುವು ನೀಡಿದ್ದಾರೆ. ಈ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳನ್ನ ಪರಿಶೀಲಿಸಿದ ಅವರು ಪ್ರಯಾಣಿಕರೊಂದಿಗೆ ಮಾತಾಡಿ ಬಸ್ ಸಂಚಾರದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಪ್ರಯಾಣಿಕರು ಒಂದು ಘಂಟೆಯಿಂದ ಬಸ್ ಕಾಯ್ತಾ ಇದೀವಿ  ಎಂದು ಸಚಿವರಿಗೆ ಉತ್ತರಿಸಿದಾಗ ಬಸ್ ಕಂಟ್ರೋಲರ್ ವಿರುದ್ಧ ಹರಿಹಾಯ್ದರು. ಎಲ್ಲಾ ರೂಟ್ ಗಳಿಗೆ ಬಸನ್ನು ಬಿಡಬೇಕು ,ಪ್ರಯಾಣಿಕರಿಗೆ ತೊಂದರೆ ನೀಡಬಾರದೆಂದು ತಾಕಿತ್ತು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳನ್ನು ಕಾಪಾಡದ ಅಧಿಕಾರಿ ಹಾಗೂ ಕಂಟ್ರೋಲರ್ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಾಕಿತ್ತು ಮಾಡಿ. ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿ ಕಂಟ್ರೋಲರಗೆ ಚುರುಕು ಮುಟ್ಟಿಸಿದ್ದಾರೆ.

ತದನಂತರ ಸಚಿವ ಪ್ರಭು ಚವ್ಹಾಣ್​ ಅವರು ಯಾದಗಿರಿ ಜಿಲ್ಲೆಯ ಹಳೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಅವ್ಯವಸ್ಥೆಯನ್ನ ಕಂಡು ಜಿಲ್ಲಾ ಸರ್ಜನ್ ಸಂಜಯ್ ರಾಯಚೂರಕರಗೆ ತರಾಟೆಗೆ ತೆಗದುಕೊಂಡರು. ನೀವು ಏನ್ ಮಾಡ್ತಾ ಇದೀರಾ ಆಸ್ಪತ್ರೆ ಸ್ವಚ್ಚತೆಯಿಲ್ಲ ಎಂದು ಸಂಜಯ್ ರಾಯಚೂರಕರಗೆ ಚುರಕು ಮುಟ್ಟಿಸಿದ್ದಾರೆ. ನೀವು ಹಾಗೂ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂದು ಸಾರ್ವಜನಿಕರು ಕಂಪ್ಲೇಟ್ ನೀಡಿದ್ದಾರೆ. ಏಕೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ , ವೈದ್ಯರು ಏಕೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ‌ ಎಂದು ಗುಡುಗಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವರು ಹೊರಗಡೆ ಖಾಸಗಿ ಅಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕಂಪ್ಲೀಟ್ ಬರುತ್ತಾ ಇದೆ . ನೀವು ಏನು ಮಾಡ್ತಾ ಇದೀರಾ ? ಎಂದು ಜಿಲ್ಲಾ ಸರ್ಜನಗೆ ಖಡಕ್ಕಾಗಿ ಪ್ರಶ್ನಿಸಿದ್ದಾರೆ.

ಯಾರಾದರೂ ವೈದ್ಯರು ಈ ರೀತಿ ಕಂಡು ಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಅಮಾನತು ಮಾಡಬೇಕೆಂದು ಸೂಚನೆ ನಿಡಿದ್ದಾರೆ. ಇಲ್ಲವಾದಲ್ಲಿ ನಿಮ್ಮನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಸಚಿವರು ಸರ್ಜನವರಿಗೆ ಎಚ್ಚರಿಸಿದ್ದಾರೆ.

ಅಲ್ಲದೆ ಗೋಶಾಲೆಗೆ ಭೇಟಿ ನೀಡಿ ಗೋ ಮಾತೆಗೆ ಪೂಜೆ ಸಲ್ಲಿಸಿ ಬಾಳೆಹಣ್ಣು ಸಮರ್ಪಿಸಿದರು. ಈ ಸಂದರ್ಭದಲ್ಲಿ ಗೋ ಶಾಲೆ ನಿರ್ವಹಣೆಯನ್ನ ಕಂಡು ಸಂಸ್ಥೆಯ ಅಧ್ಯಕ್ಷ ಗೌತಮಾ ಚಾಂದ ಅವರಿಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: