ಮೈಸೂರು

ಅರಮನೆ ಆವರಣದೊಳಗೆ ಅಶುಚಿತ್ವ : ತರಾಟೆಗೆ ತೆಗೆದುಕೊಂಡ ಮೇಯರ್

ಮೈಸೂರು, ಮೇ.12:-  ಮೈಸೂರು ಅರಮನೆ ಆವರಣದೊಳಗಿನ ಅಶುಚಿತ್ವ ಕಂಡು ಮೇಯರ್ ಎಂ.ಜೆ ರವಿಕುಮಾರ್. ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.ಅರಮನೆಯ ವರಾಹ ದ್ವಾರದ ಬಳಿಯಿರುವ ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದಕ್ಕೆ ಕಿಡಿಕಾರಿದರು.

ಅರಮನೆ ವರಾಹದ್ವಾರದ ಬಳಿ  ಕುಡಿಯುವ ನೀರಿನ ಸ್ಥಳದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು  ಮೇಯರ್ ಅವರು ಸ್ವತಃ ತಮ್ಮ ಕೈಯ್ಯಾರೆ  ತಾವೇ ತೆರವುಗೊಳಿಸಿದರು.  ಅಚ್ಚುಕಟ್ಟಾಗಿ ಇಟ್ಟುಕೊಂಡಿಲ್ಲದಿರುವುದಕ್ಕೆ ಹಾಗೂ ಶುಚಿತ್ವ ಕಾಪಾಡದಿರುವುದಕ್ಕೆ ಅರಮನೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವರಾಹ ದ್ವಾರದ ಬಳಿ ಬೆಂಕಿ ಬಿದ್ದಿದ್ದ ಸ್ಥಳವನ್ನು ಪರಿಶೀಲಿಸಲು ಆಗಮಿಸಿದ ವೇಳೆ ಇಲ್ಲಿ ಸ್ವಚ್ಛತೆ ಇಲ್ಲದಿರುವುದು ಮೇಯರ್ ಅವರ ಗಮನಕ್ಕೆ ಬಂದಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: