ಕರ್ನಾಟಕಪ್ರಮುಖ ಸುದ್ದಿ

ಲಂಚ ಪಡೆದಿದ್ದಕ್ಕೆ ನಾಲ್ಕು ವರ್ಷ ಜೈಲುವಾಸ

ರಾಜ್ಯ, (ಮಂಡ್ಯ), ಮೇ.12:- ಮಂಡ್ಯ ಸಮಾಜ ಕಲ್ಯಾಣ ಕಚೇರಿ ಅಧೀಕ್ಷಕ ಹಾಗೂ ಡಿ.ದರ್ಜೆ ನೌಕರರಿಬ್ಬರಿಗೆ ಟೆಂಡರ್ ಪಡೆದಿದ್ದ ಕಾರಿನ ಬಿಲ್ಲಿನ ಪಾವತಿಗೆ ಲಂಚ ಪಡೆದಿದ್ದ ಕಾರಣಕ್ಕೆ  ಜಿಲ್ಲಾ ಸತ್ರ ನ್ಯಾಯಾಲಯ ನಾಲ್ಕುವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಧೀಕ್ಷಕ ಸಿ.ಕೆ.ವೇಣುಪ್ರಕಾಶ್ ಹಾಗೂ ಡಿ.ದರ್ಜೆ ನೌಕರ ಸೋಮಲಿಂಗಶೆಟ್ಟಿ ಮಂಡ್ಯ ತಾಲೂಕಿನ ಕಚ್ಚಿಗೆರೆ ಗ್ರಾಮದ ಕೆ.ಬಿ.ಮರೀಗೌಡರ ಪುತ್ರ ಕೆ.ಎಂ.ಶಿವರಾಜು ತಮ್ಮ ಟಾಟಾ ಇಂಡಿಕಾ ಕ್ಯಾಬ್ ಕಾರನ್ನು ಟೆಂಡರ್ ನೀಡಿದ್ದರು. ಬಾಡಿಗೆ ಹಣದ ಬಿಲ್ಲುಗಳನ್ನು ಮೇಲಾಧಿಕಾರಿಗಳಿಗೆ ಕಳಿಸಲು ಈ ಇಬ್ಬರು 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಿವರಾಜು 2010ರಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಲಂಚದ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶೆ ಎಚ್.ಬಿ.ವಿಜಯಕುಮಾರಿ ಅವರು ಇಬ್ಬರಿಗೂ ತೀರ್ಪು ಪ್ರಕಟಿಸಿದ್ದಾರೆ. ನಾಲ್ಕುವರ್ಷ ಜೈಲುವಾಸ ಹಾಗೂ 10ಸಾವಿರ ರೂ.ದಂಡ. ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಶಿಕ್ಷಗೆ ಗುರಿಪಡಿಸುವಂತೆ ಆದೇಶ ನೀಡಲಾಗಿದೆ. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: