ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಜೇಮ್ಸ್ ಚಿತ್ರ ಅಪ್ಪು ಧ್ವನಿಯಲ್ಲಿ ರೀ-ಡಬ್ಬಿಂಗ್ ; ಏ.22 ರಂದು ರೀ-ರಿಲೀಸ್‌

ರಾಜ್ಯ(ಬೆಂಗಳೂರು),ಏ.18 :- ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಕೊನೇ ಚಿತ್ರ `ಜೇಮ್ಸ್’  ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಅಪ್ಪು ಹೃದಯಾಘಾತದಿಂದ ಅಗಲಿದ್ದು, ಅಭಿಮಾನಿಗಳಿಗೆ ಭಾರೀ ನೋವುಂಟು ಮಾಡಿತ್ತು. ಅಪ್ಪು ಅಗಲಿಕೆಗೂ ಮುನ್ನ ಜೇಮ್ಸ್ ಸಿನಿಮಾದ ಕೆಲವು ಡಬ್ಬಿಂಗ್ ಪಾರ್ಟ್ಗಳು ಬಾಕಿ ಉಳಿದಿದ್ದು, ಅವರ ಅಣ್ಣ ಶಿವರಾಜ್‌ ಕುಮಾರ್ ಧ್ವನಿಯಲ್ಲಿ ಅದನ್ನು ಕಂಪ್ಲೀಟ್ ಮಾಡಿ ರಿಲೀಸ್ ಮಾಡಲಾಗಿತ್ತು. ಅಭಿಮಾನಿಗಳು ಅಪ್ಪು ಚಿತ್ರದಲ್ಲಿ ಶಿವಣ್ಣನ ಧ್ವನಿಯನ್ನು ಮೆಚ್ಚಿದ್ದರೂ ಎಲ್ಲೋ ಒಂದೆಡೆ ಪುನೀತ್ ಧ್ವನಿ ಇದ್ರೇನೆ ಚೆನ್ನಾಗಿರುತ್ತಿತ್ತು ಎಂಬ ನಿರಾಶೆ ಇತ್ತು. ಆದರೆ ಇದೀಗ ಜೇಮ್ಸ್ ತಂಡ ಅಪ್ಪು ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದೆ.

ಜೇಮ್ಸ್ ತಂಡ ಸಿನಿಮಾವನ್ನು ಸಂಪೂರ್ಣವಾಗಿ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್ ಮಾಡಿ ರೀ-ರಿಲೀಸ್‌ಗೆ ಪ್ಲಾನ್ ನಡೆಸಿದ್ದಾರೆ. ಅಪ್ಪು ಇಲ್ಲದೇ ಇದೆಲ್ಲ ಹೇಗೆ ಸಾಧ್ಯ ಎಂಬ ಗೊಂದಲ ಅಭಿಮಾನಿಗಳಲ್ಲಿ ಇದ್ದರೂ ಇದು ನಿಜ. ಹೊಸದೊಂದು ಆವಿಷ್ಕಾರದ ಮೂಲಕ ಅಪ್ಪು ಧ್ವನಿಯ ಮಾದರಿಯಿಂದ ಇಡೀ ಸಿನಿಮಾದ ಡಬ್ಬಿಂಗ್ ಅನ್ನು ಮಾಡಲಾಗುತ್ತಿದೆ. ಈ ಹಿಂದೆ ಶಿವಣ್ಣ ನೀಡಿದ್ದ ಧ್ವನಿಯನ್ನು ತೆಗೆದು ಆ ಜಾಗದಲ್ಲಿ ಹೊಸ ಟೆಕ್ನಾಲಜಿ ಮುಖಾಂತರ ಮಾಡಲಾಗುತ್ತಿರುವ ಅಪ್ಪು ಧ್ವನಿಯನ್ನು ಕೂರಿಸಲಾಗುತ್ತಿದೆ ಎಂದು ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.

ಇಂತಹ ಟೆಕ್ನಾಲಜಿ ಮೂಲಕ ಧ್ವನಿಯನ್ನು ರಿ ಕ್ರಿಯೇಟ್ ಮಾಡಿ ಡಬ್ಬಿಂಗ್ ಅನ್ನು ಕೂರಿಸಲಾಗುತ್ತಿರುವುದು ಇದೇ ಮೊದಲು. ಈ ಹೊಸ ಸೌಂಡ್ ಟ್ರ್ಯಾಕ್ ಕೂರಿಸಿದ ಜೇಮ್ಸ್ ಸಿನಿಮಾವನ್ನು ಇದೇ ತಿಂಗಳು ಏ.22ನೇ ತಾರೀಖಿನಂದು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ವೀಕ್ಷಿಸಬಹುದು ಎಂದು ಚೇತನ್ ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: