ಸುದ್ದಿ ಸಂಕ್ಷಿಪ್ತ

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೇ.13ರಂದು ಕಾರ್ಯಾಗಾರ

ಮೈಸೂರು.ಮೇ.12: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ವಿಟಿಯೂ ಸಹಯೋಗದೊಂದಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇ.13ರಂದು ಬೆಳಿಗ್ಗೆ 10ಗಂಟೆಗೆ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದ ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ವಿಟಿಯೂ ಕುಲಪತಿ ಡಾ.ಕರಿಸಿದ್ದಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡುವರು,  ‘ತಂತ್ರಜ್ಞಾನದ ನಾವಿನ್ಯತೆ, ಸಂಶೋಧನೆ ಮತ್ತು ಸವಾಲುಗಳು’ ವಿಷಯ ಸಂಬಂಧಿಸಿದ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿ ಪರಿಷತ್ ನ ಉಪಾಧ್ಯಕ್ಷ ಪ್ರೊ.ಗುರುನಂಜಯ್ಯ ಎಸ್.ಎಂ. ವಿಷಯ ಮಂಡಿಸುವರು ನೀಡುವರು. ಡಾ.ಬಿ.ಜಿ.ನರೇಶ್ ಕುಮಾರ್ ಅಧ್ಯಕ್ಷತೆ ವಹಿಸುವರು, ವಿಟಿಯು ಕಾರ್ಯನಿರ್ವಾಹಕ ಸದಸ್ಯ ಸಂಜೀವ್ ಕುಬಕಡ್ಡಿ, ಕರಾವಿಪದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಎನ್.ಎಂ. ಇವರುಗಳು ಭಾಗವಹಿಸುವರು.

ಸಮಾರೋಪ ಸಮಾರಂಭವು ಮಧ್ಯಾಹ್ನ 2.30ಕ್ಕೆ ನಡೆಯಲಿದ್ದು ಎಂ.ಐ ಟಿ ಸಂಸ್ಥೆಯ ಅಧ್ಯಕ್ಷ ಎಸ್.ಮುರುಳಿ ಅಧ್ಯಕ್ಷತೆ ವಹಿಸುವರು. ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಡಾ.ಬಿ.ಜಿ ಸಂಗಮೇಶ್ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕರಾವಿಪದ ನರೇಂದ್ರ ಆಡನೂರ, ಸಂಸ್ಥಾಪಕ ಸದಸ್ಯ ಹರಿಪ್ರಸಾದ್ ಹಾಘೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: