
ಮೈಸೂರು
ಇತಿಹಾಸ ಪ್ರಸಿದ್ಧ ಕೊಡಗಹಳ್ಳಿಯಲ್ಲಿ ವಿಜೃಂಭಣೆಯ ಶ್ರೀರಾಮ ಕಲ್ಯಾಣೋತ್ಸವ
ಮೈಸೂರು, ಏ.20:- ಬನ್ನೂರಿನ ಸಮೀಪವಿರುವ ಇತಿಹಾಸ ಪ್ರಸಿದ್ಧ ಕೊಡಗಹಳ್ಳಿಯಲ್ಲಿ ಶ್ರೀರಾಮ ನವಮಿ ಅಂಗವಾಗಿ ಇಂದು (ಏ.20) ಕಲ್ಯಾಣೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು.
ಇಡೀ ಊರಿನಲ್ಲಿ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಕೊಡಗಹಳ್ಳಿ ಗ್ರಾಮದ ಪಟೇಲ್ ಚಿಕ್ಕಜವರಪ್ಪ, ಗ್ರಾ.ಪಂ.ಅಧ್ಯಕ್ಷ ಧನಂಜಯ್, ಶ್ರೀರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ದೀಕ್ಷಿತ್, ಇಂಜಿನಿಯರ್ ಡಿ.ಸಿ.ರವಿಕುಮಾರ್, ಚೆನ್ನಪ್ಪ, ಉಪನ್ಯಾಸಕಿ ವಿಂದ್ಯಾ ಪ್ರಸಾದ್, ಕಾವ್ಯ ಜಿ., ಕಾವ್ಯಶ್ರೀ ರಾವ್, ದರ್ಶನ್ ಕುಮಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)