ಕರ್ನಾಟಕಪ್ರಮುಖ ಸುದ್ದಿ

ವಾರಣಾಸಿ-ಕೊಲಂಬೊ ನಡುವೆ ನೇರ ವಿಮಾನ : ಪ್ರಧಾನಿ ಮೋದಿ ಘೋಷಣೆ

ದೇಶ-ವಿದೇಶ (ಪ್ರಮುಖ ಸುದ್ದಿ) ಕೊಲಂಬೋ, ಮೇ 12 : ಮುಂಬರುವ ಆಗಸ್ಟ್ ತಿಂಗಳಿನಿಂದ ವಾರಾಣಸಿ ಮತ್ತು ಮತ್ತು ಕೊಲಂಬೊ ನಡುವೆ ನೇರ ವಿಮಾನ ಹಾರಾಟ ಪ್ರಾರಂಭ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಶ್ರೀಲಂಕಾ ರಾಜಧಾನಿಯಲ್ಲಿ ನಡೆಯುತ್ತಿರುವ ಬೌದ್ಧ ಸಮ್ಮೇಳನ ವೈಶಾಖ ಉತ್ಸವಲದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ ಆರಂಭಿಸಲಾಗುವುದು. ಆ ಮೂಲಕ ಶ್ರೀಲಂಕಾದ ತಮಿಳು ಜನತೆ ನೇರವಾಗಿ ವಾರಣಾಸಿಗೆ ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಪಡೆಯಬಹುದು ಎಂದರು.

ಬುದ್ಧನ ತತ್ವಗಳು ಸಹಕಾರಿ :

“ಬುದ್ಧನಿಗೆ ಜ್ಞಾನೋದಯವಾದ ನಾಡು ಭಾರತ. ಇದೀಗ ಬುದ್ಧ ನೆಲೆಸಿದ್ದ ನಾಡು ಶ್ರೀಲಂಕಾಗೆ ನೇರ ವಿಮಾನ ಹಾರಾಟ ಆರಂಭಿಸಲಿದ್ದೇವೆ. ಶಾಂತಿ ಸ್ಥಾಪನೆಗಾಗಿ ಬೌದ್ಧ ಧರ್ಮ ನೀಡಿರುವ ಸಂದೇಶಗಳಲ್ಲಿ ನನಗೆ ನಂಬಿಕೆ ಇದೆ. ವಿಶ್ವವ್ಯಾಪಿ ಪಿಡುಗಾಗಿ ಪರಿಣಮಿಸಿರುವ ಹಿಂಸಾಚಾರಕ್ಕೆ ಬೌದ್ಧ ಧರ್ಮದ ಸಂದೇಶಗಳು ಪರಿಹಾರ ದೊರಕಿಸಬಲ್ಲವು. ದುರಂತವೆಂದರೆ ಶಾಂತಿ ಸ್ಥಾಪನೆಗೆ ಅಡ್ಡಿಯಾಗಿರುವ ಭಯೋತ್ಪಾದನೆ ಕುರಿತು ಸಾವು-ನೋವು ಸಂಭವಿಸಿದಾಗ ಮಾತ್ರ ನಾವು ಮಾತನಾಡುತ್ತೇವೆ. ಬದಲಾಗಿ ಭಯೋತ್ಪಾದನೆ ವಿರುದ್ಧ ವಿಶ್ವ ಸಮುದಾಯ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಭಯೋತ್ಪಾದನೆಗೆ ಪರಿಹಾರ ದೊರಕಬಹುದು ಎಂದು ಪ್ರಧಾನಿ ಮೋದಿ ಹೇಳಿದರು.

-ಎನ್.ಬಿ.ಎನ್.

Leave a Reply

comments

Related Articles

error: