
ಮೈಸೂರು
ಮೇ.1 : ಗೋ ಗ್ರೀನ್,ಗೋ ಕ್ಲೀನ್ ರಸ್ತೆ ಓಟ
ಮೈಸೂರು, ಏ.22:- ದಿವಂಗತ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮೈಸೂರಿನಲ್ಲಿ ಮೇ 1 ರಂದು 5 ಕೀಲೋ ಮೀಟರ್ ರಸ್ತೆ ಓಟ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ.
ಈ ಕುರಿತು ಕ್ರೀಡಾ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಸುರೇಶ್ ಮಾಹಿತಿ ನೀಡಿದ್ದು, ಗೋ ಗ್ರೀನ್ ಗೋ ಕ್ಲೀನ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಸ್ತೆ ಓಟ ಕಾರ್ಯಕ್ರಮ ಆಯೋಜಿಸಲಾಗಿದೆ. ಬೇರೆ ವಿಭಾಗಗಳಲ್ಲಿ ಓಟ ಅಯೋಜಿಸಲಾಗಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಪ್ರಾರಂಭವಾಗಿ ಎಸ್ ಪಿ ಸರ್ಕಲ್, ಪೊಲೀಸ್ ಅಯುಕ್ತರ ಕಚೇರಿ ಮೂಲಕ ಈ ಓಟ ಸಾಗಲಿದೆ. ಅಂತರ
ರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)