ಕರ್ನಾಟಕಪ್ರಮುಖ ಸುದ್ದಿ

ಬೀಳ್ಕೊಡುಗೆ ಹಾಗೂ ಅಭಿನಂದನೆ ಸಮಾರಂಭ

ರಾಜ್ಯ(ದಾವಣಗೆರೆ) ಏ.23:- ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಮತ್ತು ವಾರ್ತಾ ಸಹಾಯಕರಾದ ಭಾಗ್ಯ ಎಂ.ಟಿ ಇವರುಗಳು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದು ಇವರಿಗೆ ಬೀಳ್ಕೊಡುಗೆ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್.ಡಿ ಇವರಿಗೆ ಉಪನಿರ್ದೇಶಕರಾಗಿ ಬಡ್ತಿ ಹೊಂದಿರುವುದಕ್ಕೆ ಅಭಿನಂದನೆ ಸಮಾರಂಭವನ್ನು ವಾರ್ತಾ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಒಕ್ಕೂಟದ ವತಿಯಿಂದ ಇಂದು ವಾರ್ತಾ ಇಲಾಖೆ ಕಚೇರಿಯಲ್ಲಿ ನೆರವೇರಿಸಲಾಯಿತು.
ಈ ವೇಳೆ ಉಪನಿರ್ದೇಶಕರಾಗಿ ಬಡ್ತಿ ಹೊಂದಿರುವ ವಾರ್ತಾಧಿಕಾರಿ ಅಶೋಕ್ ಕುಮಾರ್, ಸಹಾಯಕ ನಿರ್ದೇಶಕರಾದ ತುಕಾರಾಂ ರಾವ್ ಹಾಗೂ ವಾರ್ತಾ ಸಹಾಯಕರಾದ ಭಾಗ್ಯ ಎಂ.ಟಿ ದಾವಣಗೆರೆ ವಾರ್ತಾ ಇಲಾಖಾ ಅನುಭವಗಳು, ಮಾಧ್ಯಮ ಬಳಗದವರ ಸಹಕಾರವನ್ನು ಸ್ಮರಿಸಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಮಂಜುನಾಥ್, ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕೆ.ಚಂದ್ರಣ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ನಿಕಟಪೂರ್ವ ಅಧ್ಯಕ್ಷರಾದ ವೀರಪ್ಪ ಬಾವಿ, ಪತ್ರಕರ್ತರಾದ ಕುಣಿಬೆಳೆಕೆರೆ ಸುರೇಶ್, ರವಿ ಈ ವೇಳೆ ಮಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರಾದ ಫಕ್ರುದ್ದೀನ್, ಜೈಮುನಿ, ವೀರೇಶ್, ವಾಸುದೇವ ಇತರೆ ಮಾಧ್ಯಮದ ಮಿತ್ರರು, ವಾರ್ತಾ ಇಲಾಖೆ ಸಿಬ್ಬಂದಿಗಳು ಹಾಗೂ ಅಪ್ರೆಂಟಿಸ್ ಹಾಜರಿದ್ದರು.
ಇದೇ ವೇಳೆ ಜಿಲ್ಲಾಡಳಿತದ ವತಿಯಿಂದ ಈ ವರ್ಷ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ವಾರ್ತಾ ಇಲಾಖೆ ಸಿಬ್ಬಂದಿ ಬಸವರಾಜ ಬಿ.ಎಸ್ ಇವರನ್ನು ಅಭಿನಂದಿಸಲಾಯಿತು. (ಜಿ.ಕೆ,ಎಸ್. ಎಚ್)

Leave a Reply

comments

Related Articles

error: