ಸುದ್ದಿ ಸಂಕ್ಷಿಪ್ತ

ಕ್ಷಯರೋಗದ ಅರಿವು ಮತ್ತು ಕ್ರಿಕೆಟ್ ಪಂದ್ಯಾವಳಿ ಮೇ.13 ಮತ್ತು 14ರಂದು

ಮೈಸೂರು.ಮೇ.12 : ಕ್ಷಯರೋಗದ ಬಗ್ಗೆ ಅರಿವು ಮತ್ತು ಆರ್.ಎನ್.ಟಿ.ಸಿ.ಪಿ ಕ್ರಿಕೆಟ್ ಪಂದ್ಯಾವಳಿಯನ್ನು ಮೇ.13 ಮತ್ತು 14ರಂದು ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದ್ದು.

ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡುವರು, ಜಿಲ್ಲಾಧಿಕಾರಿ ರಂದೀಪ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಡಾ.ಬಸವರಾಜು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುವರ್ಣ.ಸಿ,  ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ರಾಮಚಂದ್ರ.ಸಿ.ಜಿ, ಜಿ.ಪಂ.ಸದ್ಯ ಡಾ.ಮಂಥರ್ ಗೌಡ್ರು, ಪೊಲೀಸ್ ಉಪ ಆಯುಕ್ತ ಶೇಖರ್ ಎಚ್.ಟಿ, ಸಹಾಯಕ ಆಯುಕ್ತ ಉಮೇಶ್ ಜಿ.ಶೇಟ್ ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

 

Leave a Reply

comments

Related Articles

error: