ಮೈಸೂರು

ರೈಲಿಗೆ ಸಿಲುಕಿ ಅಪರಿಚಿತ ಸಾವು

ಮೈಸೂರು,ಏ.28:- ನಂಜನಗೂಡು-ಕಡಕೊಳ ರೈಲು ನಿಲ್ದಾಣಗಳ ನಡುವೆ ತಿರುಪತಿ-ಚಾಮರಾಜನಗರ ಎಕ್ಸಪ್ರೆಸ್ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ.

ಸುಮಾರು 30-40ವರ್ಷ ವಯಸ್ಸಿನವರಾಗಿದ್ದು, 4.8ಅಡಿ ಎತ್ತರ, ಬೂದು ಬಣ್ಣದ ರೆಡಿಮೇಡ್ ಟೀ ಶರ್ಟ್, ಹಸಿರು ಬಣ್ಣದ ಕಾಟನ್ ಪ್ಯಾಂಟ್, ಬೂದುಬಣ್ಣದ ಎರಡು ಕಾಟನ್ ಗ್ಲೌಸ್ ಧರಿಸಿದ್ದಾರೆ. ವಾರಸುದಾರರಿದ್ದಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸರು ದೂ.ಸಂ.0821-2516579 ಸಂಪರ್ಕಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: