ಸುದ್ದಿ ಸಂಕ್ಷಿಪ್ತ

ಚಿಣ್ಣರ ಕಲಾಲೋಕ ಸಮಾರೋಪ ಮೇ.13ಕ್ಕೆ

ಮೈಸೂರು.ಮೇ.12 : ಕಲಾಧಾರೆ ಕಲ್ಚರಲ್ ಟ್ರಸ್ಟ್ ನ ಮಾಸ್ಟರ್ ಎನ್ ಬ್ಲಾಸ್ಟರ್ ನೃತ್ಯ ತಂಡದ ಆಶ್ರಯದಲ್ಲಿ ಚಿಣ್ಣರ ಕಲಾಲೋಕದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಮೇ.13ರ ಶನಿವಾರ ಸಂಜೆ 6ಕ್ಕೆ ಗಾನ ಭಾರತಿಯಲ್ಲಿ ಆಯೋಜಿಸಲಾಗಿದೆ.

ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟಿಸುವರು. ಭಾರತ ಆಹಾರ ನಿಗಮ ಸದಸ್ಯ ಜೆ.ಜಯಂತ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿ.ವೈಎಸ್ಪಿ ಜೆ.ಅನುಷ, ಚಲನಚಿತ್ರ ನಟಿ ಆರ್.ಅನುಷ, ನಿರ್ಮಾಪಕರಾದ ನಟ ನರೇಶ್ ಗೌಡ, ವೆಂಕಟೇಶ್, ಪತ್ರಕರ್ತ ದಿನೇಶ್ ಕುಮಾರ್, ನಗರಪಾಲಿಕೆ ಸದಸ್ಯ ಸೀಮಾ ಪ್ರಸಾದ್ ಹಾಗೂ ಸಂಸ್ಥೆಯ ಅಧ್ಯಕ್ಷ ಚಾಮರಾಜ್ ಕಲಾಧಾರೆ ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: