ಸುದ್ದಿ ಸಂಕ್ಷಿಪ್ತ

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆರೋಗ್ಯ ತಪಾಸಣಾ ಶಿಬಿರ ಮೇ.13ಕ್ಕೆ

ಮೈಸೂರು.ಮೇ.12 : ಸ್ನೇಹ ಸಮ್ಮಿಲನ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜಯಂತಿಯಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಮೇ.13ರಂದು ಬೆಳಿಗ್ಗೆ 8.ಕ್ಕೆ ಗಾಂಧಿನಗರದ 5ನೇ ಮುಖ್ಯ ರಸ್ತೆಯ 9ನೇ ಅಡ್ಡರಸ್ತೆಯಲ್ಲಿ ಆಯೋಜಿಸಲಾಗಿದೆ.

ಆರ್.ಎಸ್.ಎಸ್ ದಕ್ಷಿಣ ಪ್ರಾಂತ ಸಂಚಾಲಕ ವೆಂಕಟರಾಮ್ ಉದ್ಘಾಟಿಸುವರು. ಸಿದ್ದರಾಜು ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ರಾಜೇಶ್ ಪಾಲ್ಗೊಳ್ಳುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯ ನಟರಾಜು, ಕಮಲ ಉದಯಕುಮಾರ್, ಭಾರತ ಮಾತ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಸಿದ್ದರಾಜು ಹಾಗೂ ಸುರೇಶ್ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: