ಕರ್ನಾಟಕಪ್ರಮುಖ ಸುದ್ದಿ

ಎಸ್.ಎಸ್.ಎಲ್.ಸಿಯಲ್ಲಿ ನೇಕಾರನ ಪುತ್ರಿ ರಾಜ್ಯಕ್ಕೆ ಪ್ರಥಮ : ಉತ್ತರಕನ್ನಡದ ಮೂವರು ದ್ವಿತೀಯ

ರಾಜ್ಯ,(ಬಾಗಲಕೋಟೆ), ಮೇ.12:- ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ನೇಕಾರನ ಪುತ್ರಿಯೋರ್ವಳು 625ಕ್ಕೆ 625ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿದ್ದಾಳೆ.

ಜಮಖಂಡಿ ತಾಲೂಕಿನ ಬನಹಟ್ಟಿ ನಗರದ ಪಲ್ಲವಿ ರವೀಂದ್ರ ಶಿರಹಟ್ಟಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯಾಗಿದ್ದಾಳೆ. ತಂದೆ ಪದವೀಧರ, ತಾಯಿ ಪಿಯುಸಿ ಓದಿದ್ದು, ಇವರಿಗಿರುವ ಇಬ್ಬರು ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಬೇಕೆನ್ನುವುದೇ ಇವರ ಉದ್ದೇಶವಾಗಿದ್ದು, ಮಕ್ಕಳ ಓದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ನಂದಿನಿ
ಈಶ್ವರ ಜೋಶಿ

ಉತ್ತರ ಕನ್ನಡ ಜಿಲ್ಲೆಯ ಮೂವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 625ಕ್ಕೆ 624 ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಕುಮಟಾ ತಾಲೂಕು ಮೂರೂರಿನ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿ ಈಶ್ವರ್ ಜೋಶಿ, ನಿರ್ಮಾ ಕಾನ್ವೆಂಟ್ ನ ನಂದಿನಿ ನಾಯ್ಕ್, ಹಾಗೂ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿ ಹೇಮಂತ್ ಶಾಸ್ತ್ರೀ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದವರಾಗಿದ್ದಾರೆ. ಇವರ ಸಾಧನೆಗೆ ಪೋಷಕರು ಹಾಗೂ ಶಾಲೆಯ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

 

Leave a Reply

comments

Related Articles

error: