ಕರ್ನಾಟಕಪ್ರಮುಖ ಸುದ್ದಿ

ಮಾರುತೇಶ್ವರ ಜಾತ್ರೆಯಲ್ಲಿನ ಹಾಲೋಕುಳಿ ಸ್ಪರ್ಧೆ ; ಯುವಕರಲ್ಲಿ ದೇಸಿ ಸಾಹಸಿ ಕ್ರೀಡೆಗಳಲ್ಲಿ ಆಸಕ್ತಿ

ರಾಜ್ಯ(ವಿಜಯಪುರ),ಮೇ.2 :-  ಬೇಸಿಗೆ ಬಂದ್ರೆ ಸಾಕು ಕರ್ನಾಟಕದಲ್ಲಿ ಜಾತ್ರೆಗಳ ಸೀಸನ್ ಶುರುವಾಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆಗಳಲ್ಲಿ ಗ್ರಾಮದ ಜನ್ರೆಲ್ಲ ಸೇರಿ ಒಂದಲ್ಲಾ ಒಂದು ಕ್ರೀಡೆ ಅಥವಾ ಸ್ಪರ್ಧೆಯನ್ನು ಹಮ್ಮಿಕೊಂಡಿರ್ತಾರೆ. ಯುವಕರಿಗೆ ರೈತರಿಗೆ ಪ್ರೋತ್ಸಾಹ ನೀಡಲು ಆಯೋಜಿಸಲಾಗುವ ಈ ಕಾರ್ಯಕ್ರಮಗಳು ನೋಡುಗರ ಮೈಯಲ್ಲಿ ರೋಮಾಂಚನ ಮೂಡಿಸುತ್ತವೆ. ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯಲ್ಲಿನ ಹಾಲೋಕುಳಿ ಕ್ರೀಡೇಯನ್ನು ಸಂಭ್ರಮದಿಂದ ಆಚರಿಸಲಾಗಿದೆ.

ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಮಾರುತೇಶ್ವರ ದೇವರ ಜಾತ್ರೆಯ ಅಂಗವಾಗಿ ಹಾಲೋಕುಳಿ ಎಂಬ ಕಂಬ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮದ ದೇವಸ್ಥಾನದ ಆವರಣದಲ್ಲಿ ಸುಮಾರು 40 ಅಡಿ ಎತ್ತರ ಬೃಹತ್ ಕಂಬವನ್ನು ನೆಟ್ಟು, ಆ ಕಂಬಕ್ಕೆ ಮೊದಲೇ ಎಣ್ಣೆ ಹಾಗೂ ತುಪ್ಪವನ್ನು ಸುರಿದು ಜಾರುವ ಪದಾರ್ಥಗಳನ್ನು ಹಚ್ಚಲಾಗಿರುತ್ತದೆ. ಗ್ರಾಮದ ಯುವಕರೆಲ್ಲ ಸೇರಿ ಆ ಕಂಬವನ್ನು ಮೇಲೆ ಹತ್ತಿ ಮೇಲಿರುವ ಬಾಳೆಹಣ್ಣಿನ ಗೊಂಚಲು ಕೀಳುವ ಸ್ಪರ್ಧೆ ಇದಾಗಿರುತ್ತದೆ.

ಹಾಲೋಕುಳಿ, ಭಾರ ಎತ್ತುವುದು, ಕುಸ್ತಿ, ನಾಟಕ ಪ್ರದರ್ಶನ, ಪುರಾಣ, ಪ್ರವಚನ, ಡೊಳ್ಳಿನ ಪದಗಳು, ಜಾನಪದ ಸೇರಿದಂತೆ ನಿತ್ಯ ಒಂದು ಕಾರ್ಯಕ್ರಮಗಳನ್ನು ಕಮೀಟಿ ಹಾಗೂ ಹಡಗಲಿ ಜನ್ರು ಆಯೋಜಿಸಿದ್ದರು. ಮಾರುತೇಶ್ವರನ 56ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಒಂದು ವಾರಗಳ ವರೆಗೆ ವಿವಿಧ ಕಾರ್ಯಕ್ರಮಗಳು ನಡೆದಿದ್ದು. ಈಗಲು ಜಾತ್ರಾ ಮಹೋತ್ಸವಗಳು ಗ್ರಾಮೀಣ ಭಾಗದ ಸಾಹಸಿ ಕ್ರೀಡೆಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ನಿಂತಿದೆ.(ಎಸ್.ಎಂ)

Leave a Reply

comments

Related Articles

error: