ಮೈಸೂರು

ಅಧಿಕಾರವನ್ನು ಬಿಟ್ಟು ಸಮಾಜ ದ ಪರಿವರ್ತನೆ ಮಾಡಿದವರು ಬಸವಣ್ಣನವರು : ಎಸ್.ಎ. ರಾಮದಾಸ್

ಮೈಸೂರು, ಮೇ.3:- ಇಂದು ವಿದ್ಯಾರಣ್ಯಪುರಂ ನಲ್ಲಿರುವ ಶಾಸಕರ (ಬಿಜೆಪಿ) ಕಛೇರಿಯ ಮುಂದೆ ಬಸವ ಜಯಂತಿ ಕಾರ್ಯಕ್ರಮ ಹಾಗೂ ಅಕ್ಷಯ ತೃತೀಯ ಮಹೋತ್ಸವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ, ಕೃಷ್ಣರಾಜ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿತ್ತು.

ಜ್ಯೋತಿ ಬೆಳಗುವ ಮೂಲಕ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ  ಶಾಸಕರಾದ ಎಸ್.ಎ.ರಾಮದಾಸ್ ಅವರು ಇವತ್ತು ವಿಶ್ವಾದ್ಯಂತ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಆಚರಿಸುತ್ತಿದ್ದೇವೆ, ಇತಿಹಾಸದಲ್ಲಿ ಅಂದಿನಿಂದ ಇಂದಿನವರೆಗೂ ಕೂಡಾ ಸಾಧನೆ ಮಾಡಿದವರನ್ನು ಸನ್ಮಾನ ಮಾಡಿಕೊಂಡು ಬಂದಿರುವುದನ್ನು ನಾವು ಕಾಣಬಹುದು. ಇಂದು ಬಸವ ಜಯಂತಿಯ ದಿನ ನಾವು ವಿವಿಧ ಕ್ಷೇತ್ರದಲ್ಲಿ ಕಾಯಕವನ್ನು ಮಾಡುತ್ತಿರುವಂತಹರನ್ನು ಕರೆದು ಸನ್ಮಾನ ಮಾಡಿದ್ದೇವೆ. ನಾವು ಮಹಾತ್ಮರನ್ನು ಒಂದು ಜಾತಿಗೆ ಜೋಡಿಸುವುದು ಸರಿಯಲ್ಲ ಅವರು ಜಾತಿಯನ್ನು ಮೀರಿದವರು ಎಂದರು.

ಕಾಣದ ರೀತಿಯಲ್ಲಿ ಎಲೆಮರೆ ಕಾಯಿಯಂತೆ ವಿವಿಧ ಕ್ಷೇತ್ರದಲ್ಲಿ ಕಾಯಕ ಮಾಡುತ್ತಿರುವವರನ್ನು ನಾವು ಇಂದು ಸನ್ಮಾನ ಮಾಡಿದ್ದು ಖುಷಿ ಎನಿಸುತ್ತಿದೆ. ತಮ್ಮ ಅಧಿಕಾರವನ್ನು ಬಿಟ್ಟು ಸಮಾಜ ದ ಪರಿವರ್ತನೆ ಮಾಡಿದವರು ಬಸವಣ್ಣನವರು. “ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣನವರು. ಬಸವಣ್ಣನವರು ಸಂಸತ್ತಿನ ಪರಿಕಲ್ಪನೆಯನ್ನು ಮೂಡಿಸಿದ ಮಹಾಜ್ಞಾನಿ. ಮಹಿಳೆಯರೂ ಸೇರಿದಂತೆ ವಿವಿಧ ಸಮಾಜಗಳ ಹಿನ್ನೆಲೆಯಿಂದ ಬಂದ ನಾಯಕರ ಮೂಲಕ ಅನುಭವ ಮಂಟಪ ಎಂಬ ಸಮಾಜದ ಧಾರ್ಮಿಕ ಸಂಸತ್ತಿನ ಮೂಲಕ
ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಕಲ್ಪನೆ ಮೂಡಿಸಿದರು. ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದ್ದು ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಮನುಷ್ಯನಲ್ಲಿ ಸಮಾನತೆಯನ್ನು ತರಬೇಕು ಎಂದು ಶ್ರಮಿಸಿದವರು ಬಸವಣ್ಣನವರು ಎಂದರು.

ನಮ್ಮ ವೃತ್ತಿ ಗೌರವವನ್ನ ವಿಶ್ವಕ್ಕೆ ನೀಡಿದವರು ಬಸವಣ್ಣನವರು, ಜಾತಿ ಆಧಾರದ ಮೇಲೆ ಯಾರಿಗೂ ಬೆಲೆಯನ್ನು ಕೊಡಬಾರದು ಅವರ ಕಾಯಕದ ಮೇಲೆ ಕೊಡಿ ಎಂದು ಹೇಳಿದ್ದವರು ಬಸವಣ್ಣನವರು. ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಹೇಳಿ ಅಂತರ್ಜಾತೀಯ ವಿವಾಹವನ್ನು ಮಾಡಿಸಿದವರು, ಎಲ್ಲಾ ಸಮಾಜದವರು ಒಟ್ಟಿಗೆ ಕೂತು ಊಟ ಮಾಡಬೇಕು ಎಂದು ದಾಸೋಹವನ್ನು 12 ನೆ ಶತಮಾನವನ್ನು ಪ್ರಾರಂಭ ಮಾಡಿದವರು ಬಸವಣ್ಣನವರು. ಈ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳನ್ನು ನಾವು ನೆನಪಿಸಿಕೊಳ್ಳಬೇಕು ಜಾತಿ, ಧರ್ಮವನ್ನು ಲೆಕ್ಕಿಸದೆ ದಾಸೋಹ ಹಾಗೂ ಶಿಕ್ಷಣವನ್ನು ನೀಡುತ್ತಿದೆ ಸಿದ್ದಗಂಗಾ ಮಠ. ನಾನೇನು ಮಾಡಿದೆ ಎಂದು ಗರ್ವಪಡಬೇಡ ನೀನು ಕಾಯಕ ಮಾಡು ಕಾಯಕದಲ್ಲೇ ಕೈಲಾಸವನ್ನು ನೋಡು ಎಂದು ಹೇಳಿದರು. ಬಸವಣ್ಣನವರ ವಚನವನ್ನು ಓದಿದರೆ ಸಾಲದು ನಾವು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅದಕ್ಕೆ ಒಂದು ಅರ್ಥ ಬರುತ್ತದೆ ಎಂದರು.

ಬಸವ ಜಯಂತಿ ಕಾರ್ಯಕ್ರಮದ ನಿಮಿತ್ತ ಬಸವತತ್ವ ಪರಿಪಾಲಕ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ  ಸಿ.ಆರ್.ರಾಣಿ ( ವೈದ್ಯಕೀಯ ಕ್ಷೇತ್ರ ) ,  ನೀಲಮ್ಮ ( ಸಾರ್ವಜನಿಕ ಸೇವೆ),  ಡಾ. ಬಸವರಾಜು ( ವೈದ್ಯಕೀಯ ಕ್ಷೇತ್ರ),  ನೀಲಾಂಬಿಕೆ(ಬಸವತತ್ವ ಪ್ರಚಾರಾಕರು),  ಎಸ್.ಇ. ಗಂಗಾಧರ ಸ್ವಾಮಿ ( ಆರಕ್ಷಕ ಕ್ಷೇತ್ರ ) ಇವರುಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಬಿ ಎಲ್ ಎ 1 ಪ್ರಸಾದ್ ಬಾಬು, ಪ್ರಮುಖರಾದ ಬಿ.ವಿ.ಮಂಜುನಾಥ್, ಪ್ರಶಾಂತ್, ವಿನಯ್ ಪಾಂಚಜನ್ಯ, ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ(ಅಪ್ಪಿ), ಮುರುಳಿ, ರವಿ, ಪ್ರದೀಪ್ ಪ್ರಸಾದ್ , ಮಂಜು, ರಮೇಶ್, ಶಿವಣ್ಣ, ಶಿವಪ್ರಸಾದ್, ಸೋಮು , ಅಶೋಕ್, ಚಂದ್ರಶೇಖರ್, ಸದಾಶಿವ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: