ಮೈಸೂರು

ಒಂದೇ ಸ್ವತ್ತಿಗೆ ಬೇರೆ ಬೇರೆ ನಂಬರ್ ನೀಡಿ ಅಕ್ರಮ ಖಾತೆ : ಪ್ರತಿಭಟನೆ

ಮೈಸೂರು,ಮೇ.4:- ಮೈಸೂರು ನಗರ ದೇವರಾಜ ಮೊಹಲ್ಲಾ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿರುವ ನಿವೇಶನ ಸಂಖ್ಯೆ #587ಇದ್ದು, ಇದಕ್ಕೆ #577ಎಂದು ಬೇರೊಂದು ನಂಬರ್ ನೀಡಿ ಅಕ್ರಮವಾಗಿ ಖಾತೆ ಮಾಡಿದ್ದು ಇನ್ನೂ ಅನೇಕ ಅಕ್ರಮ ಖಾತೆಗಳನ್ನು ವಲಯ ಕಛೇರಿ 06ರಲ್ಲಿ ಮಾಡಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವೆಂಕಟೇಶ್, ಸುರೇಶ್, ಕೃಷ್ಣ ಮತ್ತು ಮಹಾದೇವಿ ಎಂಬವರು ಪ್ರತಿಭಟನೆ ನಡೆಸಿದರು.

ಮೈಸೂರು ಮಹಾನಗರ ಪಾಲಿಕೆ ಎದುರು ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ದೇವರಾಜ ಮೊಹಲ್ಲಾ ಬಿಡಾರ ಕೃಷ್ಣಪ್ಪ ರಸ್ತೆ ಮೈಸೂರು ನಮ್ಮ ಸ್ವತ್ತಿನ ಸಂಖ್ಯೆ #587ಆಗಿದ್ದು ಇದಕ್ಕೆ #577ಎಂದು ಬೇರೊಂದು ನಂಬರ್ ನೀಡಿ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಯಾವುದೇ ದಾಖಲಾತಿಗಳಿಲ್ಲದೆ ಖಾತೆ ಮಾಡಿದ್ದು ಇದೊಂದೇ ಅಲ್ಲದೇ #576ರಿಂದ 589, 27/1,27/2,27/3,27/4ರ ಸ್ವತ್ತುಗಳಿಗೆ #585,576, 588 ಎಂದು ಒಂದೇ ಸ್ವತ್ತಿಗೆ ಬೇರೆ ಬೇರೆ ನಂಬರ್ ಗಳನ್ನು ನೀಡಿ ಅಕ್ರಮ ಖಾತೆ ಮಾಡಿದ್ದಾರೆ. ಸಿಟಿ ಸರ್ವೆಯವರೇ ಕಾರ್ಪೋರೇಷನ್ ನವರಿಂದ 17/2/2016ರಂದು ಒಂದೇ ನಿವೇಶನಕ್ಕೆ ಎರಡೆರಡು ಖಾತೆಗಳನ್ನು ಮಾಡಿ ಅದಕ್ಕೆ ಬೇರೆ ಬೇರೆ ನಂಬರ್ ಗಳನ್ನು ನಮೂದಿಸಿಕೊಂಡಿದ್ದಾರೆ. ಸಿಟಿ ಸರ್ವೆಯವರೇ ತಿಳಿಸಿದ್ದು ಇದುವರೆಗೆ ಯಾವ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ನಾವು ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ. ನಮಗೆ ನ್ಯಾಯ ಸಿಗುವವರೆಗೂ  ಹೋರಾಟ ನಡೆಸುತ್ತೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: