ಮೈಸೂರು

ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ

ಮೈಸೂರು,ಮೇ.4:-   ಸಂಸದ ಪ್ರತಾಪ್ ಸಿಂಹ ಅವರು  ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ  ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.

ಕೆ.ಎಂ. ನಿಶಾಂತ್ ಅವರ ಜನ ಸೇವಾ ಕೇಂದ್ರ ದ ವತಿಯಿಂದ 250ಕ್ಕೂ
ಹೆಚ್ಚುಫಲಾನುಭವಿಗಳಿಗೆ ಪಿ.ಎಂ. ಆತ್ಮನಿರ್ಭರ ಭಾರತ ಯೋಜನೆಯ 10000.ರೂ ಸಾಲ ವಿತರಣೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಆದೇಶ ಪತ್ರಗಳ ವಿತರಣೆ, ಮುದ್ರಾ ಯೋಜನೆಗೆ ಅರ್ಜಿ ವಿತರಣೆ ಕಾರ್ಯಕ್ರಮವನ್ನು ಸಂಸದರ ಕಛೇರಿ ಜಲದರ್ಶಿನಿಯ ಬಳಿ ಹಮ್ಮಿಕೊಳ್ಳಲಾಗಿತ್ತು.  ಇದೇ ವೇಳೆ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೋವಿಡ್ ಪರಿಹಾರನಿಧಿ ಫಲಾನುಭವಿಗಳು  ಸಂಸದರಾದ ಪ್ರತಾಪ್ ಸಿಂಹ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ   ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಟಿ.ಎಸ್. ಶ್ರೀವತ್ಸ, ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ ರವಿಶಂಕರ್, ಬಿಜೆಪಿ
ಯುವಮೋರ್ಚಾ ಉಪಾಧ್ಯಕ್ಷ ಕೆ.ಎಂ. ನಿಶಾಂತ್ ಹಾಗೂ ನೂರಾರು ಫಲಾನುಭವಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)
 

Leave a Reply

comments

Related Articles

error: