ಮೈಸೂರು

ಟೆರೇಸಿಯನ್ ಕಾಲೇಜಿನಲ್ಲಿ ನಡೆದ  ತಾಲೂಕು ಮಟ್ಟದ ಮಹಿಳಾ ವಾಲಿಬಾಲ್, ಕಬಡ್ಡಿ, ಖೊ ಖೋ ಟೂರ್ನಿ

ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸಿದ್ಧಾರ್ಥ ನಗರದಲ್ಲಿರುವ ಟೆರೇಸಿಯನ್ ಪಿಯು ಕಾಲೇಜು ವತಿಯಿಂದ ಜಂಟಿಯಾಗಿ ತಾಲೂಕು ಮಟ್ಟದ 2016-17 ನೇ ಸಾಲಿನ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಶುಕ್ರವಾರ ಟೆರೇಸಿಯನ್ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ರೇವರೆಂಡ್ ಸಿಸ್ಟರ್ ಕ್ರಾಯ್ಸ್, ಸಿಎಸ್‍ಎಸ್‍ಟಿ – ಕರ್ನಾಟಕ ಪ್ರಾಂತ – ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರೆವರೆಂಡ್ ಸಿಸ್ಟರ್ ಸಾಜಿತ, ಕಾರ್ಯದರ್ಶಿ, ಟೆರೇಸಿಯನ್ ಶಿಕ್ಷಣ ಸಂಸ್ಥೆಗಳು – ಮೈಸೂರು – ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೆವರೆಂಡ್ ಸಿಸ್ಟರ್ ಕ್ರಾಯ್ಸ್ ಅವರು ವಾಲಿಬಾಲ್ ಆಡುವ ಮೂಲಕ ಟೂರ್ನಿಯನ್ನು ಉದ್ಘಾಟಿಸಿರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ರೆವರೆಂಡ್ ಸಿಸ್ಟರ್ ಸಾಜಿತ ಅವರು ಮಾತನಾಡಿ, ಕ್ರೀಡೆಯ ಜತೆಗೆ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೂ ಒತ್ತು ನೀಡಬೇಕು ಎಂದರು.

ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿವಿಧ ಕಾಲೇಜುಗಳ 38 ತಂಡಗಳು, 456 ವಿದ್ಯಾರ್ಥಿಗಳು ಆಗಮಿಸಿದ್ದರು. ವಾಲಿಬಾಲ್, ಖೋಖೋ, ಕಬಡ್ಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಹೆಚ್ಚಿಸಿಕೊಂಡರು.

ವಿದ್ಯಾವರ್ಧಕ ಪಿಯು ಕಾಲೇಜಿಕ ದೈಹಿಕ ಶಿಕ್ಷಣ ನಿರ್ದೇಶಕ ಆನಂದ ಕುಮಾರ್, ಟೆರೇಸಿಯನ್ ಪಿಯು ಕಾಲೇಜಿಕ ದೈಹಿಕ ಶಿಕ್ಷಣ ನಿರ್ದೇಶಕ ಅಂಥೋನಿ ಮೋಸೆಸ್, ಡಾಕ್ಟರ್ ಆ್ಯಂಟೊ ರಿಚರ್ಡ್, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: