ಕರ್ನಾಟಕಪ್ರಮುಖ ಸುದ್ದಿ

ಟಿಪ್ಪರ್ ಹರಿದು ತಂದೆ-ಮಗ ಸಾವು

ರಾಜ್ಯ, (ಬಾಗಲಕೋಟ) ಮೇ.13:- ಟಿಪ್ಪರ್ ಹರಿದು ತಂದೆ-ಮಗ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ‌ತಾಲೂಕಿನ ನಾಗೂರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.

ಮೃತರನ್ನು ಹನಮಂತಪ್ಪ ಬಡಿಗೇರ (55), ಮೌನೇಶ ಬಡಿಗೇರ (25) ಎಂದು ಗುರುತಿಸಲಾಗಿದೆ. ಹನುಮಂತಪ್ಪ ಹೊಲದಲ್ಲಿ ಮಣ್ಣು ಹಾಕಿಸಲು ತಮ್ಮದೇ ಹೊಲಕ್ಕೆ ಟಿಪ್ಪರ್ ತರಿಸಿಕೊಂಡಿದ್ದರು. ರಾತ್ರಿ ಒಂದೆಡೆ ಮಲಗಿದ ವೇಳೆ ಟಿಪ್ಪರ ಚಾಲಕ ನೋಡದೆ ಟಿಪ್ಪರ್  ರಿವಸ೯ ತೆಗೆದುಕೊಂಡಾಗ ಈ ದುರ್ಘಟನೆ ನಡೆದಿದೆ. ಟಿಪ್ಪರ್ ಚಾಲಕ ವಿಜಯಪುರ ಮೂಲದ ಜಾಫರ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಾವಳಗಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಸಾವಳಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: