ಮೈಸೂರು

ವಿಶ್ವ ತಾಯಂದಿರ ದಿನ: `ರಾಜಕುಮಾರ’ ಚಿತ್ರ ವೀಕ್ಷಿಸಿದ ವೃದ್ಧಾಶ್ರಮದ 50 ತಾಯಂದಿರು

ಮೈಸೂರು,ಮೇ 13: ನಾಳೆ ವಿಶ್ವ ತಾಯಂದಿರ ದಿನ ಹಿನ್ನೆಲೆಯಲ್ಲಿ ವೃದ್ಧಾಶ್ರಮದಲ್ಲಿದ್ದ 50 ತಾಯಂದಿರು `ರಾಜಕುಮಾರ’ ಚಲನಚಿತ್ರವನ್ನು ವೀಕ್ಷಿಸಿ ಸಂತಸಪಟ್ಟರು.

ನಗರದ ಗಾಯತ್ರಿ ಚಿತ್ರಮಂದಿರದಲ್ಲಿ ಪುನೀತ್‍ರಾಜ್‍ಕುಮಾರ್‍ ಅಭಿನಯದ ತಾಯಿ ಮಕ್ಕಳ ಸಂಬಂಧ ಬೆಸೆಯುವ ರಾಜಕುಮಾರ ಚಿತ್ರ ವೀಕ್ಷಿಸಿದ ತಾಯಂದಿರು ಸಿನಿಮಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರಲ್ಲದೆ, ತಮ್ಮ ಮಕ್ಕಳನ್ನು ನೆನಪಿಸಿಕೊಂಡರು.

ಪರಿವರ್ತನಂ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರ ವೀಕ್ಷಿಸಲು ಆಗಮಿಸಿದ್ದ ತಾಯಂದಿರಿಗೆ ಗುಲಾಬಿ ಹಾಗೂ ಹಣ್ಣು ಹಂಪಲು ವಿತರಿಸಿ ವಿಶ್ವ ತಾಯಂದಿರ ದಿನದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಉಮಾ ಮಣಿ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ವರದಿ-ಕೆ.ಎಸ್‍—ಎಚ್‍.ಎನ್‍—ಎಂ.ಎನ್)

Leave a Reply

comments

Related Articles

error: