
ದೇಶಪ್ರಮುಖ ಸುದ್ದಿ
ಇಂದೋರ್ ನ ಎರಡು ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ : ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಸಜೀವ ದಹನ
ದೇಶ(ಇಂದೋರ್),ಮೇ.7:- ಇಂದೋರ್ ನಲ್ಲಿ ಶುಕ್ರವಾರ ತಡರಾತ್ರಿ ಮೂರು ಗಂಟೆ ಸುಮಾರಿಗೆ ಎರಡು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ.
ಇಲ್ಲಿನ ವಿಜಯನಗರ ಪ್ರದೇಶದ ಸ್ವರ್ನ್ ಬಾಗ್ ಕಾಲೋನಿಯಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹೃದಯ ವಿದ್ರಾವಕ ಘಟನೆಯಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಅಗ್ನಿ ಅನಾಹುತದ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು’ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ನಮಗೆ 3 ಗಂಟೆ ಬೇಕಾಯಿತು ಎಂದು ತಿಳಿಸಿದ್ದಾರೆ. ಅಗ್ನಿಅನಾಹುತಕ್ಕೀಡಾದ ಈ ಕಟ್ಟಡ ಇಶಾಕ್ ಪಟೇಲ್ ಅವರ ಮನೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ ಸತ್ತವರೆಲ್ಲರನ್ನು ಬಾಡಿಗೆದಾರರು ಎಂದು ಹೇಳಲಾಗುತ್ತದೆ. ಇವರಲ್ಲಿ ಕೆಲವರು ಓದುತ್ತಿದ್ದರು ಮತ್ತು ಕೆಲವರು ಕೆಲಸ ಮಾಡುತ್ತಿದ್ದರು.
ಮೃತರ ಹೆಸರು ಆಶಿಶ್, ಆಕಾಂಕ್ಷಾ, ಗೌರವ್, ನೀತು ಸಿಸೋಡಿಯಾ ಆಗಿದ್ದು ಇಬ್ಬರ ಹೆಸರು ದೃಢಪಟ್ಟಿಲ್ಲ. ಇದಲ್ಲದೆ, ಈ ಅನಾಹುತದಲ್ಲಿ ಗಾಯಗೊಂಡವರ ಹೆಸರು ಫಿರೋಜ್, ಮುನೀರಾ, ವಿಶಾಲ್, ಹರ್ಷದ್ ಮತ್ತು ಸೋನಾಲಿ. ಸದ್ಯ ಪೊಲೀಸರು ಅನಾಹುತದಲ್ಲಿ ಬಲಿಯಾದವರ ಸಂಪೂರ್ಣ ವಿವರ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್,ಎಸ್.ಎಚ್)