ಮೈಸೂರು

ವೈದ್ಯರ ಸೇವೆಗೆ ನಿರ್ಧರಿತ ಸಮಯವಿಲ್ಲ : ಎಸ್.ಎ.ರಾಮದಾಸ್ ಬಣ್ಣನೆ

ಮೈಸೂರು, ಮೇ.13:-  ಇಲ್ಲಿನ ಶ್ರೀ ನಟರಾಜ ಪ್ರತಿಷ್ಠಾನ,  ನಟರಾಜ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ದಾದಿಯರ ದಿನ ಮತ್ತು ಪ್ಯಾರಾ ಮೆಡಿಕಲ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚಿದಾನಂದ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದು ದಾದಿಯರ ದಿನ ಮತ್ತು ಪ್ಯಾರಾ ಮೆಡಿಕಲ್ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಇಂದಿನ ಪ್ರಸ್ತುತ ಜಗತ್ತು ಸ್ಪರ್ಧಾತ್ಮಕ ಜಗತ್ತಾಗಿ ಪಸರಿಸುತ್ತಿದೆ. ವಿದ್ಯಾರ್ಥಿಗಳು ವೈದ್ಯ ವೃತ್ತಿಯನ್ನೇ ಬಯಸುತ್ತಿದ್ದಾರೆ. ವೈದ್ಯರು ದೇವರು ಇದ್ದ ಹಾಗೆ. ಅವರ ಸೇವೆ ಅಪಾರ. ವೈದ್ಯರು ಯಾವುದೇ ಭೇದ, ಭಾವವಿಲ್ಲದೇ ನಮಗೆ ನಿಮಗೆ ದಿನದ 24 ಗಂಟೆ ಸೇವೆ ನೀಡುತ್ತಾರೆ ಎಂದು ವೈದ್ಯ ವೃತ್ತಿಯನ್ನು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೈಯಲ್ಲಿ ಮೇಣದ ಬತ್ತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭ ಡಾ.ದಿಲೀಪ್ ಕುಮಾರ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. – (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: