ಕರ್ನಾಟಕಪ್ರಮುಖ ಸುದ್ದಿ

ಶ್ರೀಲಂಕಾದಲ್ಲಿ ಭಾರತ ಪ್ರಭಾವ : ಕರಾಚಿಯತ್ತ ತೆರಳಿದ ಚೀನಾ ಜಲಾಂತರ್ಗಾಮಿ ನೌಕೆಗಳು

ದೇಶ-ವಿದೇಶ (ಪ್ರಮುಖ ಸುದ್ದಿ) ಮೇ 13, ನವದೆಹಲಿ:- ಚೀನಾದ ಲಾಂತರ್ಗಾಮಿಗಳು ತನ್ನ ಜಲ ಗಡಿ ವ್ಯಾಪ್ತಿಯಲ್ಲಿ ಲಂಗರು ಹಾಕಲು ಶ್ರೀಲಂಕಾ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಅವು ಪಾಕಿಸ್ತಾನದ ಕರಾಚಿಯತ್ತ ಸಾಗಿವೆ ಎಂದು ತಿಳಿದು ಬಂದಿದೆ.

ಬುದ್ಧಪೂರ್ಣಿಮೆಯ ಅಂಗವಾಗಿ ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ವೈಶಾಖ ದಿನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಜುಗರವಾಗದಿರಲೆಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಚೀನಾದ ಜಲಾಂತರ್ಗಾಮಿಗಳು ಲಂಗರು ಹಾಕಲು ಅವಕಾಶ ನಿರಾಕರಿಸಿದ್ದರು. ಶ್ರೀಲಂಕಾ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಜಲಾಂತರ್ಗಾಮಿ ನೌಕೆಗಳು ಕರಾಚಿಯತ್ತ ಪ್ರಯಾಣ ಬೆಳೆಸಿವೆ ಎನ್ನಲಾಗಿವೆ.

ಶ್ರೀಲಂಕಾದಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಮೆಗಾ ಕಂಟೇನರ್ ಟರ್ಮಿನಲ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದೇ ಕಾರಣಕ್ಕೆ ಚೀನಾ ತನ್ನ ಸಬ್‍ಮರೀನ್ ಅನ್ನು ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಲಂಗರು ಹಾಕಲು ಅನುಮತಿ ಕೋರಿತ್ತು. ವಾಣಿಜ್ಯಾತ್ಮಕ ಕಾರಣದ ನೆಪದಲ್ಲಿ ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯತ್ನಿಸುತ್ತಿರುವ ಚೀನಾ, 2013 ರಿಂದಲೂ ಸಹ ಪರಮಾಣು ಮತ್ತು ಜಲಾಂತರ್ಗಾಮಿಗಳನ್ನು ಹಿಂದೂ ಮಹಾಸಾಗರದಂಚಿನ ವಿವಿಧ ದೇಶಗಳಲ್ಲಿ ತಂದು ನಿಲ್ಲಿಸಲು ಪ್ರಯತ್ನಿಸುತ್ತಿದೆ. ಈ ವಲಯದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವವು ಭಾರತದ ವಾಣಿಜ್ಯ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ.

-ಎನ್.ಬಿ.ಎನ್.

Leave a Reply

comments

Related Articles

error: