ದೇಶಪ್ರಮುಖ ಸುದ್ದಿ
ಒಡಿಶಾದ ರಾಯಗಡ ಜಿಲ್ಲೆಯಲ್ಲಿ ‘ಕೊರೊನಾ ಸ್ಫೋಟ’ : ಎರಡು ಹಾಸ್ಟೆಲ್ ಗಳಲ್ಲಿ 64 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು
ದೇಶ(ಒಡಿಶಾ),ಮೇ.9:- ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಹಲವು ಶಾಲಾ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ರಾಯಗಡ ಜಿಲ್ಲೆಯ ಎರಡು ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ 64 ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ರ್ಯಾಂಡಮ್ ಟೆಸ್ಟ್ ನಂತರ, ಈ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ವಿದ್ಯಾರ್ಥಿಗಳಲ್ಲಿ ಕೋವಿಡ್-19 (COVID-19) ನ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಪ್ರಸ್ತುತ ಎಲ್ಲಾ ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲಾಗಿದೆ. ರಾಯಗಡ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಸರೋಜ್ ಕುಮಾರ್ ಮಿಶ್ರಾ ಪ್ರಕಾರ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಇಲ್ಲಿ ಯಾವುದೇ ಕೊರೊನಾ ಹರಡಿಲ್ಲ ಎಂದು ಹೇಳಿದ್ದು, ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸರೋಜ್ ಮಿಶ್ರಾ ಅವರು ರ್ಯಾಂಡಮ್ ಟೆಸ್ಟ್ ಸಮಯದಲ್ಲಿ ಎರಡು ಹಾಸ್ಟೆಲ್ ಗಳಲ್ಲಿ 64 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ವಿದ್ಯಾರ್ಥಿಗಳಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ ಮತ್ತು ಅವರನ್ನು ಪ್ರತ್ಯೇಕಿಸಲಾಗಿದೆ. ಆದಾಗ್ಯೂ ನಾವು ಅವರ ಮಾದರಿಗಳನ್ನು ಮರುಪರಿಶೀಲನೆಗಾಗಿ ರಾಜ್ಯ ಪ್ರಧಾನ ಕಚೇರಿಗೆ ಕಳುಹಿಸುತ್ತಿದ್ದೇವೆ. ಎರಡೂ ಹಾಸ್ಟೆಲ್ ಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.
ರಾಯಗಡ ಜಿಲ್ಲಾ ಕೇಂದ್ರ ಅನ್ವೇಶಾ ಹಾಸ್ಟೆಲ್ ನ ಒಟ್ಟು 44 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಈ ಹಾಸ್ಟೆಲ್ ನಲ್ಲಿ ರಾಯಗಡದ ಒಂಭತ್ತು ವಿವಿಧ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಅದೇ ರೀತಿ ರಾಯಗಡ ಜಿಲ್ಲೆಯ ಬಿಸ್ಮಮ್ ಕಟಕ್ ಬ್ಲಾಕ್ ನಲ್ಲಿರುವ ಹಾಟಾಮುನಿಗುಡ ಹಾಸ್ಟೆಲ್ ನ 22 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)