ಮೈಸೂರು

ಪಿಎಸ್ ಐ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯ : ಆರೋಪಿಸಿ ಪ್ರತಿಭಟನೆ

ಮೈಸೂರು,ಮೇ.9:-  ಪಿಎಸ್ ಐ ಪರೀಕ್ಷೆ ಬರೆದ  ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ, ಸರ್ಕಾರ ಅವರಿಗೆ ನ್ಯಾಯ ಸಲ್ಲಿಸಲಿ ಎಂದು ಒತ್ತಾಯಿಸಿ ಎನ್ ಎಸ್ ಯು ಐ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಮುಖವಾಡ ಧರಿಸಿ ಕುಳಿತಿದ್ದ ವ್ಯಕ್ತಿಯ ಮೇಲೆ ನೋಟುಗಳನ್ನು ಸುರಿದರು. ಪಿಎಸ್ ಐ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸದೆ ಅನ್ಯಾಯ ಮಾಡುತ್ತಿದೆ. ಇದೊಂದು ಡೀಲ್ ಸರ್ಕಾರ. ಸರ್ಕಾರ ನಡೆಸುತ್ತಿರುವ  ಅನ್ಯಾಯ ನಿಲ್ಲಿಸಲಿ, ಹಗರಣ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ, ಬೇಕೇ ಬೇಕು ನ್ಯಾಯ ಬೇಕು, ಪಿಎಸ್ ಐ ಹಗರಣದಲ್ಲಿ ಶಾಮೀಲಾಗಿರುವ ಸರ್ಕಾರಕ್ಕೆ ಧಿಕ್ಕಾರ,  ಅನ್ಯಾಯವನ್ನು ನಿಲ್ಲಿಸಿ ಎಂದು ಘೋಷಣೆ ಕೂಗಿದರು. ಪೊಲೀಸ್, ವಕೀಲರ ಧಿರಿಸು ಧರಿಸಿ ಗಮನ ಸೆಳೆದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: