ಕರ್ನಾಟಕಪ್ರಮುಖ ಸುದ್ದಿ

ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದೇ ನನ್ನ ಜೀವನದ ಕೊನೆ ಆಸೆ ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ರಾಜ್ಯ(ಚಿಕ್ಕಮಗಳೂರು),ಮೇ.09 :  ಜೆಡಿಎಸ್ ಪಕ್ಷವನ್ನು ಉಳಿಸಿ ಅದನ್ನು ಅಧಿಕಾರಕ್ಕೆ ತರಬೇಕು ಎಂಬುದೇ ನನ್ನ ಜೀವನದ ಕೊನೆ ಆಸೆ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಹೇಳಿದ್ದಾರೆ.

ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾಧ್ಯಮದೊಂದಿಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿ, ನನಗೆ 90 ವರ್ಷ ಆಗಿದೆ ಅಂತ ಯಾರೋ ಹೇಳಿದರು. ಆದರೆ ನನಗೆ ಇನ್ನೂ 90 ಆಗಿಲ್ಲ. ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ? ಒಂದು ಪ್ರಾದೇಶಿ ಪಕ್ಷವನ್ನು ಉಳಿಸಿ ಅಧಿಕಾರಕ್ಕೆ ತರಬೇಕು. ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕು ಎಂಬುದೇ ನನ್ನ ಹಠ ಎಂದು ತಿಳಿಸಿದ್ಧಾರೆ.

ಒಬ್ಬ ರಾಜಕೀಯ ಮುಖಂಡನಾಗಿ ಎಲ್ಲಿ ತಪ್ಪುತ್ತಿದ್ದೇವೆ. ಪಕ್ಷ ಉಳಿಸಲು ನಾನು ಹೇಗೆ ನಡೆದುಕೊಳ್ಳಬೇಕು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ಮನದಲ್ಲಿ ತುಂಬಾ ಆತಂಕ ಇದೆ ಎಂದಿದ್ದಾರೆ.(ಎಸ್.ಎಂ

Leave a Reply

comments

Related Articles

error: