ಮೈಸೂರು

ಅಂಬೇಡ್ಕರ್ ಕೊಡುಗೆ ಇಂದಿಗೂ ಜೀವಂತ : ವೆಂಕಟರಾಮ್ ಅಭಿಮತ

ಮೈಸೂರು, ಮೇ.13:-  ಸ್ನೇಹ ಸಮ್ಮಿಲನ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬಡ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗಾಂಧಿನಗರದಲ್ಲಿ ಏರ್ಪಡಿಸಲಾಗಿದ್ದ ಶಿಬಿರವನ್ನು ಆರ್.ಎಸ್.ಎಸ್. ದಕ್ಷಿಣ ಪ್ರಾಂತ್ಯ ಸಂಘ ಸಂಚಾಲಕ ವೆಂಕಟರಾಮ್  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಡಾ.ಬಿ.ಅರ್. ಅಂಬೇಡ್ಕರ್ ರವರ ಸಾಧನೆ ಅಪಾರ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಸಮಾನ ಸ್ಥಾನಮಾನ ಕೊಡಿಸುವಲ್ಲಿ ಹೋರಾಟ ನಡೆಸಿದವರು. ಅವರ ಕೊಡುಗೆ ಇಂದಿಗೂ ಜೀವಂತವಾಗಿದೆ. ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗಾಗಿ ಸ್ನೇಹ ಸಮ್ಮಿಲನ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಮುಂದಾಗಿರುವುದು ಸಂತಸದ ವಿಷಯ ಎಂದರು.

ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು. ಇದೇ ಸಂದರ್ಭ ಬಡ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು.

ಸ್ನೇಹ ಸಮ್ಮಿಲನದ ಅಧ್ಯಕ್ಷ ಸಿದ್ದರಾಜು, ವಿಭಾಗೀಯ ಪ್ರಚಾರಕ ರಾಜೇಶ್, ಮನಪಾ ಸದಸ್ಯರಾದ ನಟರಾಜು, ಕಮಲುದಯಕುಮಾರ್, ಭಾರತಮಾತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಸಿದ್ದರಾಜು, ಜಿಲ್ಲಾಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. – (ವರದಿ: ಕೆ.ಎಸ್, ಹೆಚ್.ಎನ್, ಎಸ್.ಎಚ್)

Leave a Reply

comments

Related Articles

error: