
ಕರ್ನಾಟಕಪ್ರಮುಖ ಸುದ್ದಿ
ಕಾಂಗ್ರೆಸ್ ಮಹಾನಾಯಕ ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಕೂರ್ತೀವೆ ಅಂತ ಕನಸು ಕಾಣ್ತಿದ್ದಾರೆ : ಬಿ.ವೈ.ವಿಜೇಂದ್ರ ಟೀಕೆ
ರಾಜ್ಯ(ತುಮಕೂರು),ಮೇ.12 : ಡಿ.ಕೆ.ಶಿವಕುಮಾರ್ ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಕೂರ್ತೀವಿ ಅಂತ ಕನಸು ಕಾಣ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಟೀಕಿಸಿದ್ದಾರೆ.
ಸಚಿವ ಸಂಪುಟಕ್ಕೆ ವಿಜಯೇಂದ್ರ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ನಾಯಕರ ಅಪೇಕ್ಷೆ ಏನಿದೆ, ಸಮಯ ಸಂದರ್ಭ ನೋಡ್ಕೊಂಡು ನಿರ್ಧಾರ ಮಾಡ್ತಾರೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರು ನಿಭಾಯಿಸ್ತೀನಿ, ನಿಭಾಯಿಸ್ತಾನೂ ಇದೀನಿ, ಮುಂದೇನು ನಿಭಾಯಿಸ್ತೀನಿ ಎಂದು ಉತ್ತರಿಸಿದ್ದಾರೆ.
ಕಾಂಗ್ರೆಸ್ ಮಹಾನ್ ನಾಯಕ ಅಂದು ಕೊಂಡವರು, ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಕೂರ್ತೀವಿ ಅಂತ ಕನಸು ಕಾಣ್ತಿದ್ದಾರೆ. ಈ ಮಹಾನ್ ನಾಯಕರು ಕೇವಲ ಬಿಜೆಪಿ ಪಕ್ಷದವರ ವಿರುದ್ಧ ಮಾತ್ರವಲ್ಲ, ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧವೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತು ಪಕ್ಷದ ನಡುವೆ ಆವಿಶ್ವಾಸ ಹುಟ್ಟಿಸುತ್ತಿದ್ದಾರೆ. ಈ ಕಾಂಗ್ರೆಸ್ ಮಹಾನಾಯಕರು ಯಾವುದೇ ರೀತಿಯ ರಿವೇಂಜ್ ತೀರಿಸ್ಕೊಂಡ್ರು ಕೂಡ, ರಾಜ್ಯದ ಪ್ರಜ್ಞಾವಂತ ಜನರು ಇದೆಲ್ಲದನ್ನ ವೀಕ್ಷಣೆ ಮಾಡ್ತಾ ಇರ್ತಾರೆ. ಬಿಜೆಪಿಗೆ ಇದು ಮುಂದೆ ವರವಾಗುತ್ತೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ. ಶಿರಾ ಮತ್ತು ಕೆ.ಆರ್.ಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದಕ್ಕೆ ಸಂತೋಷ ಇದೆ. ಸ್ವಾಮೀಜಿ ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದ ವಿಚಾರವಾಗಿ ಪ್ರತಿಕ್ರಿಯಿಸಿದ, ಕಾಂಗ್ರೆಸ್ ಪಕ್ಷದ ಮುಖಂಡರು ಮೂರ್ಖರಿದ್ದಾರೆ. 50 ರಿಂದ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಚುನಾವಣೆ ಯಾವಾಗ ಬರುತ್ತೆ, ಮತ್ತೆ ಯಾವಾಗ ಅಧಿಕಾರಕ್ಕೆ ಬರ್ತೀವೋ ಅಂತ ಆತುರದಲ್ಲಿ ಹಗಲುಗನಸು ಕಾಣ್ತಿದ್ದಾರೆ. ಅವರ ಕನಸು ನನಸಾಗಲ್ಲ, ಬಿಜೆಪಿ ಮತ್ತೆ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.(ಎಸ್.ಎಂ)