ಕರ್ನಾಟಕಪ್ರಮುಖ ಸುದ್ದಿ

ಲಕ್ಷಾಂತರ ಬೆಲೆ ಬಾಳುವ ರಕ್ತ ಚಂದನ ತುಂಡುಗಳು ಪತ್ತೆ

ಪ್ರಮುಖಸುದ್ದಿ, ರಾಜ್ಯ (ಹೊಸಕೋಟೆ) ಮೇ.13:- ಸೂಲಿಬೆಲೆ ಮಾರ್ಗದ ಲಕ್ಕೊಂಡಹಳ್ಳಿ ಬಳಿ ಕ್ವಾಲಿಸ್ ವಾಹನವೊಂದು ಶನಿವಾರ ಪತ್ತೆಯಾಗಿದ್ದು,ಇದರಲ್ಲಿ ಲಕ್ಷಾಂತರ ಬೆಲೆ ಬಾಳುವ ರಕ್ತ ಚಂದನ ತುಂಡುಗಳು ಪತ್ತೆಯಾಗಿವೆ. ಸಿಕ್ಕಿ ಬೀಳುವ ಭಯದಲ್ಲಿ ದುಷ್ಕರ್ಮಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ದೇವನಹಳ್ಳಿ ಕಡೆಯಿಂದ ಸೂಲಿಬೆಲೆ ಮಾರ್ಗವಾಗಿ ಪಶ್ಚಿಮ ಬಂಗಾಳ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕ್ವಾಲಿಸ್ ವಾಹನವೊಂದು ಅತಿವೇಗವಾಗಿ ಹೊಸಕೋಟೆ ಕಡೆ ಹೊರಟಿದೆ ಎಂದು ತಿಳಿದುಬಂದಿದೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: