ಕರ್ನಾಟಕಪ್ರಮುಖ ಸುದ್ದಿ

ಖ್ಯಾತ ಹಾಸ್ಯನಟ ಸಾಧುಕೋಕಿಲ ಕಾರು ಚಾಲಕನ ಬಂಧನ

ರಾಜ್ಯ, (ಬೆಂಗಳೂರು) ಮೇ.13:-  ಖ್ಯಾತ ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ  ಸಾಧುಕೋಕಿಲ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ವಿಜಯ್ ಕುಮಾರ್ ಅಲಿಯಾಸ್ ಗಜ ಎಂದು ಹೇಳಲಾಗಿದೆ. ಈತ ಸಾಧು ಕೋಕಿಲ ಅವರ ಕಾರಿನಲ್ಲಿದ್ದ ಲ್ಯಾಪ್ ಟಾಪ್, 3 ಸಾವಿರ ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ನ್ನು ಕಳ್ಳತನ ಮಾಡಿದ್ದ ಎನ್ನಲಾಗಿದೆ . ಏಪ್ರಿಲ್ 24 ರಂದು ಅವರ ಕಾರಿನಲ್ಲಿದ್ದ ವಸ್ತುಗಳ ಕಳ್ಳತನ ನಡೆದಿತ್ತು. ಈ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಇನ್ಸ್ ಪೆಕ್ಟರ್  ವೀರೇಂದ್ರ ಪ್ರಸಾದ್ ತಂಡ ಆರೋಪಿಯನ್ನು ಬಂಧಿಸಿದೆ.- (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: