ಮೈಸೂರು

ರಾಜಮಾತೆ ಪ್ರಮೋದಾದೇವಿ ಒಡೆಯರ್ ಭೇಟಿ ಮಾಡಿದ ಶಾಸಕ ನಾಗೇಂದ್ರ

ಮೈಸೂರು, ಮೇ.13:- ಇಂದು ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ಅವರು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ  ಲಕ್ಷ್ಮೀಕಾಂತರೆಡ್ಡಿ, ಅವರೊಂದಿಗೆ ಮೈಸೂರು ಅರಮನೆಯ ರಾಜಮಾತೆ  ಪ್ರಮೋದಾದೇವಿ ಒಡೆಯರ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು.

ಈ ಭೇಟಿಯ ಸಮಯದಲ್ಲಿ ಮೈಸೂರು ನಗರದ ಹೃದಯ ಭಾಗದಲ್ಲಿರುವ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ದೇವರಾಜ ಮಾರುಕಟ್ಟೆ, ಲ್ಯಾನ್ಸ ಡೌನ್ ಕಟ್ಟಡಗಳ ಜೀರ್ಣೋದ್ದಾರ / ಅಭಿವೃದ್ದಿ / ದುರಸ್ತಿ/ ಪಾರಂಪರಿಕ ಶೈಲಿಯಲ್ಲಿ ಮರುನಿರ್ಮಾಣದ ಕುರಿತಂತೆ ಸವಿಸ್ತಾರವಾಗಿ ಚರ್ಚಿಸಿದರು. ಈ ಕಟ್ಟಡಗಳ ಸಂರಕ್ಷಣೆ, ಪಾರಂಪರಿಕ ಶೈಲಿಯಲ್ಲಿ ಮರುನಿರ್ಮಾಣದ ಕುರಿತಂತೆ ರಾಜ್ಯ ಸರ್ಕಾರದಿಂದ ರಚನೆಯಾದ ಟಾಸ್ಕ್ ಫೋರ್ಸ ಸಮಿತಿ, ಪಾರಂಪರಿಕ ತಜ್ಞರ ಸಮಿತಿ, ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್ ನಿರ್ಣಯಗಳು, ನ್ಯಾಯಾಲಯಗಳಿಂದ ನೀಡಿದ ಆದೇಶಗಳು ಹಾಗೂ ಪಾರಂಪರಿಕ ಸಂರಕ್ಷಣಾ ಸಮಿತಿಗಳು ನೀಡಿರುವ ಅಭಿಪ್ರಾಯಗಳನ್ನು ವರದಿಗಳನ್ನು ವಿವರಿಸಿದರು, ಈ ಕುರಿತಂತೆ ಮೈಸೂರು ಮಹಾನಗರಪಾಲಿಕೆಯ ಆಯುಕ್ತರು ರಾಜಮಾತೆ ಪ್ರಮೋದಾ ದೇವಿ ಅವರಿಗೆ ಸಂಪೂರ್ಣ ದಾಖಲಾತಿಗಳೊಂದಿಗೆ ಮನವರಿಕೆ ಮಾಡಿಕೊಟ್ಟರು, ಈ ಎಲ್ಲ ವಿಷಯಗಳನ್ನು ಆಲಿಸಿದ ನಂತರದಲ್ಲಿ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿಯವರು, ಪ್ರಸ್ತುತ ಕಟ್ಟಡದ ಸಂರಕ್ಷಣೆ / ಮರು ನಿರ್ಮಾಣ ಕುರಿತಂತೆ ಈಗಾಗಲೇ ಕೈಗೊಂಡಿರುವ ನಿರ್ಧಾರಗಳಲ್ಲದೇ ತಮಗೆ ತಿಳಿದಿರುವ ಅತ್ಯಂತ ನುರಿತ ಪರಿಣಿತ ತಜ್ಞರೊಂದಿಗೆ ಈ ಕುರಿತಂತೆ ಮತ್ತೊಮ್ಮೆ ಚರ್ಚಿಸುವುದಾಗಿ ತಿಳಿಸಿ ಮುಂದಿನ 10-15 ದಿವಸಗಳಲ್ಲಿ ಈ ಕಟ್ಟಡಗಳ ಸಮರ್ಪಕ ಸಾರ್ವಜನಿಕರ ಉಪಯೋಗಕ್ಕೆ ಹೇಗೆ ಸಮರ್ಪಿಸಬೇಕು ಎಂಬ ಕುರಿತಂತೆ ಒಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಈ ಸಮಯದಲ್ಲಿ ಅರಮನೆ ಮಂಡಳಿ ಉಪ ನಿರ್ದೇಶಕ  ಸುಬ್ರಮಣ್ಯ, ವಲಯ ಕಚೇರಿ-06 ರ ಸಹಾಯಕ ಆಯುಕ್ತ  ಮಂಜುನಾಥ್, ಇಂಜಿನಿಯರ್ ಕವಿತಾ, ಬಿ.ಎಲ್.ಎ-1 ದಿನೇಶ್ ಗೌಡ, ಆಪ್ತ ಸಹಾಯಕ ಪ್ರವೀಣ್ ಕುಮಾರ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: