ಮೈಸೂರು

ಕವಲಂದೆ ಪಾಯಾತ್ರೆ ಕೈಬಿಟ್ಟಿದ್ದೇನೆ : ಕಾಳಿ ಸ್ವಾಮೀಜಿ

ಮೈಸೂರು, ಮೇ.15:- ಚಾಮುಂಡಿ ಬೆಟ್ಟಕ್ಕೆ ಇಂದು
ಕಾಳಿಮಠದ ಸ್ವಾಮೀಜಿಯವರು ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಚಾಮುಂಡಿ ಬೆಟ್ಟದಲ್ಲಿ ನಮಾಜ್ ಮಾಡಲು ಅವಕಾಶ ಕೊಡ್ತೀರ ಎಂಬ ಮುಸಲ್ಮಾನರೊಬ್ಬರು ಟಿವಿಯಲ್ಲಿ ಡಿಬೇಟ್ ಮಾಡುವಾಗ ಕೇಳಿದ್ದಾರೆ, ಚಾಮುಂಡಿ ಬೆಟ್ಟವನ್ನು ಮಸೀದಿ ಮೇಲೆ ಕಟ್ಟಿಲ್ಲ. ಶ್ರೀರಂಗಪಟ್ಟಣದಲ್ಲಿ ದೇವಸ್ಥಾನದ ಮೇಲೆ ಮಸೀದಿ ಕಟ್ಟಿದ್ದಾರೆ. ನಮಗೆ ಶ್ರೀರಂಗಪಟ್ಟದ ಮಸೀದಿಯಲ್ಲಿ ಪೂಜೆ ಮಾಡಲು ಅವಕಾಶ ಕೊಡಿ ಅಂತ ಕೇಳಿದ್ದೇವೆ.
ಅದನ್ನ ಸರ್ಕಾರ ತೀರ್ಮಾನ ಮಾಡುತ್ತದೆ. ಇನ್ನೊಂದು ಬಾರಿ ಚಾಮುಂಡಿ ಬೆಟ್ಟದ ಹೆಸರನ್ನು ಯಾರಾದರು ಮಹಮದೀಯರು ಎತ್ತಿದರೆ, ಅಥವಾ ಚಾಮುಂಡಿ ಬೆಟ್ಟದಲ್ಲಿ ನಮಾಜ್ ಅವಕಾಶ ಕೋಡಿ ಅಂದ್ರೆ ಅದು ಬೇರೆನೆ ಆಗುತ್ತೆ.
ನೀವು ಮಸೀದಿಯಲ್ಲಿ ರಾಮಾಯಣ ಪಠಣ ಮಾಡಲಿಕ್ಕೆ ಯಾವಾಗ ಕೊಡ್ತೀರಾ ಹೇಳಿ ಎಂದು ಪ್ರಶ್ನಿಸಿದರು.

ಕೌಲಂದೆ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ
ಮಿನಿ ಪಾಕಿಸ್ತಾನ ಅಂತ ಕೂಗಿದವರನ್ನ ಪೋಲಿಸರು ಬಂದಿಸಿದ್ಧಾರೆ. ಆತನ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿರುವು ದಾಗಿ ಆರಕ್ಷಕರು ಹೇಳಿದ್ದಾರೆ. ಹಾಗಾಗಿ ಪಾದಯಾತ್ರೆ ಕೈಬಿಟ್ಟಿದ್ದೇನೆ ಎಂದರು.
ಮುಖಕ್ಕೆ ಮಸಿ ಬಳಿದ ವಿಚಾರವಾಗಿ  ಪ್ರತಿಕ್ರಿಯೆ ನೀಡಿ
ಜಮೀರ್ ಅಂತ ಒಬ್ಬ ಎಂಎಲ್ ಎ ಇದ್ದಾರೆ.ಅವನು
ಕಲ್ಲು ಹೊಡೆದರೆ ,ಬೆಂಕಿ ಹಚ್ಚಿದ್ರೆ ಅವರಿಗೆ ಓದು ಬರಹ ಬರಲ್ಲ ಏನು ಗೊತ್ತಿಲ್ಲ ಅಂತಾರೆ. ಅಂತವರು ನಮ್ಮಲ್ಲೂ ಇದ್ದಾರೆ.
ಇವರಿಗೆ ಅ ಆ ಇ ಕೇಳಿದ್ರೆ ಬರಲ್ಲ. ಮಸಿ ಬಳಿತೀವಿ ಅಂತ ಬರುತ್ತಾರೆ. ಇವರನ್ನ ನೋಡಿದ್ರೆ ನಮಗೂ ಅಯ್ಯೊ ಅನ್ಸುತ್ತೆ..
ಅಂತವರಿಗೆ ಏನು ಮಾಡಲು ಆಗಲ್ಲ. ಅವರ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಅಂತ ಕೇಸು ಕೊಟ್ಟಿದ್ದೇವೆ. ನನ್ನ ಕೊಲೆ ಮಾಡಬಹುದು ಅಷ್ಟೇ. ಯಾರೊ ಅವಮಾನ ಮಾಡಿದ್ರೆ ಸನ್ಮಾನ ಮಾಡಲು ಚಾಮುಂಡಮ್ಮ ಇದ್ದಾಳೆ. ಅವಮಾನ ಮಾಡಿದವ್ರುಗೆ ಒಳ್ಳೆದಾಗ್ಲಿ ಅಂತ ಚಾಮುಂಡಿಯಲ್ಲಿ ಕೇಳಿಕೊಳ್ತೇನೆ ಎಂದರು. (ಕೆ.ಎಸ್,ಎಸ್. ಎಚ್)

Leave a Reply

comments

Related Articles

error: