ಕರ್ನಾಟಕಪ್ರಮುಖ ಸುದ್ದಿ
ಶಿಕ್ಷಣದಲ್ಲಿ ಕೇಸರೀಕರಣ ಮಾಡಲಾಗ್ತಿದೆ ; ಎ.ಐ.ಡಿ.ಎಸ್.ಒ ಆರೋಪ
ರಾಜ್ಯ(ಬೆಂಗಳೂರು),ಮೇ.16 : ಟಿಪ್ಪು ವಿವಾದ ಬಳಿಕ ಮತ್ತೊಂದು ಪಠ್ಯ ವಿವಾದ ಎದ್ದಿದ್ದು, ಎಸ್.ಎಸ್.ಎಲ್.ಸಿ ಪಠ್ಯದಲ್ಲಿ ಆರ್.ಎಸ್.ಎಸ್ ಸಂಸ್ಥಾಪಕರ ಭಾಷಣ ಅಳವಡಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಎಸ್.ಎಸ್.ಎಲ್.ಸಿ ಪಠ್ಯದಲ್ಲಿ ಕೇಶವ ಬಲಿರಾಂ ಹೆಡಗೆವಾರ್ ಅವರ ಭಾಷಣ ಅಳವಡಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಭಗತ್ ಸಿಂಗ್ ಪಠ್ಯ ಬಿಟ್ಟು ಹೆಡಗೆವಾರ್ ಭಾಷಣ ಹಾಕ್ತಿದ್ದಾರೆಂದು ಆರೋಪ ಕೇಳಿಬರುತ್ತಿದೆ. ಶಿಕ್ಷಣದಲ್ಲಿ ಕೇಸರೀಕರಣ ಮಾಡಲಾಗ್ತಿದೆ ಎಂದು ಹಲವರು ವಿರೋಧಿಸುತ್ತಿದ್ದಾರೆ. ಲಂಕೇಶರ ಮೃಗ ಮತ್ತು ಸುಂದರಿ, ಸಾರಾ ಅಬೂಬಕರ್ ಅವರ ಯುದ್ಧ, ಎ.ಎನ್.ಮೂರ್ತಿ ರಾಯರ `ವ್ಯಾಘ್ರಗೀತೆ’ ಕೈಬಿಟ್ಟಿರೋದಾಗಿ ಆರೋಪ ಮಾಡುತ್ತಿದ್ದಾರೆ. ಹೆಡಗೆವಾರ್ ಅವರ ಭಾಷಣ ಕೈಬಿಡಲು ಸೋಷಿಯಲ್ ಮೀಡಿಯಾದಲ್ಲಿ ಎ.ಐ.ಡಿ.ಎಸ್.ಒ ಸಂಘಟನೆ ಆಗ್ರಹಿಸಿದೆ.(ಎಸ್.ಎಂ)