ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರಿನ ನೂತನ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ ನೇಮಕ

ರಾಜ್ಯ(ಬೆಂಗಳೂರು),ಮೇ.17 : ಬೆಂಗಳೂರಿಗೆ  ನೂತನ ಪೊಲೀಸ್ ಕಮಿಷನರ್​​​​​ ಆಗಿ ಸಿ.ಹೆಚ್​.ಪ್ರತಾಪ್​ ರೆಡ್ಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈ ಹಿಂದೆ ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಮಲ್​ ಪಂತ್​ ಅವರನ್ನು ಅಧಿಕಾರ ದಂಡ (ಬ್ಯಾಟನ್​) ಹಸ್ತಾಂತರ ಮಾಡಲಾಗಿದ್ದು, ನಿನ್ನೆ ಪೊಲೀಸ್​ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರ ನೂತನ ಕಮಿಷನರ್​​ ಆಗಿ ಪ್ರತಾಪ್​​ ರೆಡ್ಡಿ ನಿಯೋಜಿಸಿದೆ.

ಗಾರ್ಡ್ ಆಫ್​​​​​ ಆನರ್​​​​ ಮೂಲಕ ಗೌರವ ವಂದನೆ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರು ಕಮಿಷನರ್​​ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆದಿದೆ. ಈ ವೇಳೆ ಕಮಲ್​ ಪಂತ್​ , ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು , ಡಿಸಿಪಿಗಳು ಸೇರಿದಂತೆ ಕಮಿಷನರ್​ ಕಚೇರಿ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.(ಎಸ್.ಎಂ)

Leave a Reply

comments

Related Articles

error: