ಕರ್ನಾಟಕಪ್ರಮುಖ ಸುದ್ದಿ
ಕಟಪಾಡಿ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ
ರಾಜ್ಯ(ಉಡುಪಿ),ಮೇ.17 : ದೇವಸ್ಥಾನಕ್ಕೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಟಪಾಡಿಯ ನಿವಾಸಿ ಪ್ರಕಾಶ್ ರಾವ್ ( 46) ನಾಪತ್ತೆಯಾದವರಾಗಿದ್ದಾರೆ. ಪ್ರಕಾಶ್ ರಾವ್ ಮೇ 9 ರಂದು ಕಟಪಾಡಿ ಮನೆಯಿಂದ ತೆರಳಿದ ಅವರು, ಬ್ರಹ್ಮಾವರ ತಾಲೂಕು ಸೈಬರ್ ಕಟ್ಟೆ ಗರಿಕೆಮಠ ದೇವಸ್ಥಾನಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ, ದೇವಸ್ಥಾನಕ್ಕೆ ತೆರಳಿದ್ದವರು ನಾಪತ್ತೆಯಾಗಿದ್ದಾರೆ.
ದೇವಸ್ಥಾನಕ್ಕೆಂದು ತೆರಳಿದವರು ಮನೆಗೆ ವಾಪಾಸ್ಸು ಬರಾದ ಕಾರಣ, ಮನೆಯವರೆಲ್ಲ ಸೇರಿ ಹುಡುಕಾಟ ನಡೆಸಿದ್ದಾರೆ. ಮನೆಯವರಿಗೆ ಸಿಗದ ಕಾರಣ ಪೊಲೀಸ್ ನ ಮೊರೆಹೋಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.(ಎಸ್.ಎಂ)