ಮೈಸೂರು

ಮಳೆಯ ಹಿನ್ನೆಲೆ : ನಗರ ಪ್ರದಕ್ಷಿಣೆ ನಡೆಸಿದ ಪಾಲಿಕೆ ಆಯುಕ್ತರು : ಸಮಸ್ಯೆಗೆ ಶೀಘ್ರ ಕ್ರಮ

ಮೈಸೂರು,ಮೇ.17:- ಶಾಮಸಕೃತಿಕ ನಗರಿ ಮೈಸೂರು ವರುಣನ ಆರ್ಭಟಕ್ಕೆ ತತ್ತರಿಸಿದ್ದು, ಶಾರದಾದೇವಿನಗರ ವಾರ್ಡ್ ನಂಬರ್ 45, ಮತ್ತು ಆನಂದನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಅವರು ಮಳೆಯ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣೆ ನಡೆಸಿದರು. ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಗರದಲ್ಲಿ ಒಂದು ವಾರಕ್ಕಿಂತ ಹೆಚ್ಚು ಮಳೆಯಾದ ಕಾರಣ ಅತಿಹೆಚ್ಚು ಸಮಸ್ಯೆ ವಾರ್ಡ್ ನಂಬರ್ 45ರಲ್ಲಿ ಕಂಡು ಬಂದಿದೆ. ಆನಂದನಗರ ಇವುಗಳಲ್ಲಿ ಹೆಚ್ಚಿನ ಸಮಸ್ಯೆ ಇದೆ. ಮೂರ್ನಾಲ್ಕು ದಿನ ಕೂಡ ಇದೇ ರೀತಿ ಮಳೆನೇ. ತಾತ್ಕಾಲಿಕ ಪರಿಹಾರ ಏನಿದೆ ಅದನ್ನು ನೋಡಿ ತಕ್ಷಣಕ್ಕೆ ಇವತ್ತು ನಾಳೆಯ ಒಳಗಡೆ ತಾತ್ಕಾಲಿಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಶಾಶ್ವತವಾಗಿ  ವೈಡ್ನಿಂಗ್ ಮತ್ತು ಸೇತುವೆ ನಿರ್ಮಾಣ ಶಾಶ್ವತ ಪರಿಹಾರವಾಗಿದ್ದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು. ರಾತ್ರಿ ಮಳೆ ಬಂದರೆ ಸಮಸ್ಯೆ ಆಗದಿರುವಂತೆ ಕ್ರಮವನ್ನು ಈ ಕೂಡಲೇ ತೆಗೆದುಕೊಳ್ಳುತ್ತೇವೆ ಎಂದರು.

ರಾಜಕಾಲುವೆ ಒತ್ತುವರಿಯಾಗಿದ್ದರೆ ಇಂದಿನಿಂದನೇ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಮೊದಲ ವಾರದಿಂದಲೇ ಮಹಾನಗರ ಪಾಲಿಕೆ ಮಳೆಗಾಲಕ್ಕೆ ಸಿದ್ಧತೆ ನಡೆಸಿದೆ. ಎಲ್ಲ ಕಡೆಯು ಕ್ರಮ ತೆಗೆದುಕೊಂಡಿದ್ದೇವೆ. ಆದರೆ ಈ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

comments

Related Articles

error: