
ಮೈಸೂರು
ಸದಸ್ಯತ್ವ ನೋಂದಣಿ ಶುಲ್ಕದ ಡಿಡಿ ಹಸ್ತಾಂತರ
ಮೈಸೂರು,ಮೇ.17:- ಎಐಸಿಸಿ ಆದೇಶದ ಮೇರೆಗೆ ಜರುಗಿದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿಯ ಶುಲ್ಕವನ್ನು ಕೆಪಿಸಿಸಿ ಅಧ್ಯಕ್ಷರ ಹೆಸರಿನಲ್ಲಿ ಡಿಡಿಯನ್ನು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ ಅವರಿಗೆ ಇಂದು ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ಹಸ್ತಾಂತರಿಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿಎಂ. ಶಿವಣ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್,ಸುಂದರ್ ಕುಮಾರ್,ಮಾಧ್ಯಮ ವಕ್ತಾರ ಮಹೇಶ್,ಮುಖಂಡರಾದ ಗುಣಶೇಖರ್ ,ಚಿಕ್ಕಲಿಂಗು,ಗೋವಿಂದರಾಜು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)