
ಕರ್ನಾಟಕಪ್ರಮುಖ ಸುದ್ದಿ
ಹೊಸ ಗೈಡ್ ಲೈನ್ಸ್ ಸಮೇತ ಟೋಯಿಂಗ್ ಮರು ಜಾರಿ ಮಾಡುತ್ತೇವೆ ; ನೂತನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ
ರಾಜ್ಯ(ಬೆಂಗಳೂರು),ಮೇ.17 : ಹೊಸ ಗೈಡ್ ಲೈನ್ಸ್ ಸಮೇತ ಟೋಯಿಂಗ್ ಮರು ಜಾರಿ ಮಾಡುತ್ತೇವೆ ಎಂದು ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಪೊಲೀಸ್ ಕಮಿಷನರ್ ಪತ್ರತಾಪ್ ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ, ಟ್ರಾಫಿಕ್ ನಿಯಂತ್ರ ಹಾಗೂ ಆಕ್ಸಿಡೆಂಟ್ ಸಂದರ್ಭದಲ್ಲಿ ಟೋಯಿಂಗ್ ಅವಶ್ಯಕವಾಗಿದೆ. ಸರ್ಕಾರದ ಜೊತೆ ಮಾತನಾಡಿ ಹೊಸ ಗೈಡ್ ಲೈನ್ಸ್ ಸಮೇತ ಟೋಯಿಂಗ್ ಅನ್ನು ಮತ್ತೆ ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರೌಡಿ ಎಲಿಮೆಂಟ್ಗಳನ್ನು ಇನ್ನಷ್ಟು ಮಟ್ಟ ಹಾಕುತ್ತೇವೆ. ಗ್ಯಾಂಬ್ಲಿಂಗ್, ಡ್ರಗ್ಸ್ ಪ್ರಕರಣಗಳನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಬೆಂಗಳೂರಿನ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.(ಎಸ್.ಎಂ)