ಕರ್ನಾಟಕಪ್ರಮುಖ ಸುದ್ದಿ

ಇದು ಸರ್ಕಾರದ ತಾಲಿಬಾನ್​​ ಸಂಸ್ಕೃತಿಯಾಗಿದ್ದು, ಶಾಸಕರೇ ಮುಂದೆ ನಿಂತು ಯುವಕರಿಗೆ ಗನ್​​ ತರಬೇತಿ ಕೊಡಿಸುತ್ತಿದ್ದಾರೆ ; ಯು.ಟಿ. ಖಾದರ್​​​​​​ ಆಕ್ರೋಶ

 

ರಾಜ್ಯ(ಮಂಗಳೂರು),ಮೇ.17 : ಇದು ಸರ್ಕಾರದ ತಾಲಿಬಾನ್​​ ಸಂಸ್ಕೃತಿಯಾಗಿದ್ದು, ಶಾಸಕರೇ ಮುಂದೆ ನಿಂತು ಯುವಕರಿಗೆ ಗನ್​​ ತರಬೇತಿ ಕೊಡಿಸುತ್ತಿದ್ದಾರೆಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್​​​​​​ ಆಕ್ರೋಶ ಹೊರಹಾಕಿದ್ದಾರೆ.

ಕೊಡಗಿನಲ್ಲಿ ಭಜರಂಗದಳ ಕಾರ್ಯಕರ್ತರಿಗೆ ರೈಫಲ್ ತರಬೇತಿ ನೀಡಿದ್ದರ ಕುರಿತು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಮಾಧ್ಯಮದೊಂದಿಗೆ ಮಾತನಾಡಿ,​​​​​ ಪೆ‌ನ್, ಪುಸ್ತಕದ ಬದಲು ರೈಫಲ್ ಟ್ರೈನಿಂಗ್ ಕೊಡ್ತಿದ್ದಾರೆ.  ಗೂಂಡಾಗಿರಿಗೆ ಸರ್ಕಾರವೇ ಹೊರಗುತ್ತಿಗೆ ಕೊಟ್ಟಂತಿದೆ. ಕೊಡಗಿನಲ್ಲಿ ತರಬೇತಿ ಪಡೆದವರು ಯಾರೆಂದು ಗೊತ್ತಿದೆ. ತರಬೇತಿ ಉದ್ದೇಶ  ಅನುಮತಿ ಕೊಟ್ಟಿದ್ಯಾರು ಎಂದು ತನಿಖೆಯಾಗಲಿ. ಸ್ಕೂಲ್​ಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಟ್ಟಿದ್ಯಾರು. ಗೃಹ ಸಚಿವ ಆರಗ ಜ್ಞಾನೇಂದ್ರ , ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಈ ಬಗ್ಗೆ ಜನರಿಗೆ ಉತ್ತರಿಸಲಿ ಎಂದು ಕಿಡಿಕಾರಿದ್ದಾರೆ.

ಇನ್ನು ಇದೇ ವೇಳೆ ಮುಸ್ಲಿಂ ವೋಟ್​ ಬೇಡ ಎಂದು ಹೇಳಿರುವ ಶಾಸಕ ಹರೀಶ್​ ಪೂಂಜಾ ಮೇಲೂ ಆಕ್ರೋಶ ಹೊರಹಾಕಿದ್ದು, ಬೆಳ್ತಂಗಡಿ ಶಾಸಕರದ್ದು ಅಪ್ರಬುದ್ಧ, ಕೀಳು ರಾಜಕೀಯದ ಮಾತಾಗಿದೆ. ಬೆಳ್ತಂಗಡಿ ಜ‌ನರೇ ಮುಂದೆ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: