
ಕರ್ನಾಟಕಪ್ರಮುಖ ಸುದ್ದಿ
ವರುಣ ಆರ್ಭಟ : ಬಂದಿರಿನಲ್ಲಿದ್ದ 4 ಬೋಟುಗಳು ಪಲ್ಟಿ
ರಾಜ್ಯ(ಉತ್ತರ ಕನ್ನಡ),ಮೇ.17 : ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಬಂದರಿನಲ್ಲಿ ಲಂಗರು ಹಾಕಿದ್ದ 4 ಬೋಟುಗಳು ಪಲ್ಟಿಯಾಗಿ ಮುಳುಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.
ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದು ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಮತ್ತಷ್ಟು ಹೂಳು ಸಂಗ್ರಹವಾಗಿದ್ದು, ಭಟ್ಕಳದ ದುರ್ಗಾಂಬಿಕಾ ದೇವಿ, ಶ್ರೀ ನಿತ್ಯಾನಂದ, ಜೈನ ಜಟಗಾ, ಗಗನ 3 ಹೆಸರಿನ ಬೋಟುಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ಮುಳುಗಿದ ಬೋಟುಗಳನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಒಂದು ಬೋಟ್ ಅನ್ನು ರಕ್ಷಣೆ ಮಾಡಲಾಗಿದೆ. (ಎಸ್.ಎಂ)