ಸುದ್ದಿ ಸಂಕ್ಷಿಪ್ತ

ಮೇ.15ರಂದು ನಗರಕ್ಕೆ ದಿ.ರಾಜೀವಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ

ಮೈಸೂರು.ಮೇ.13 :  ಮಾಜಿ ಪ್ರಧಾನಿ ದಿ.ರಾಜೀವಗಾಂಧಿಯವರ ಸದ್ಭಾವನಾ ಜ್ಯೋತಿ ಯಾತ್ರೆಯು ಮೇ.15ರಂದು ಸಂಜೆ 4.30ಕ್ಕೆ ಬೆಂಗಳೂರು ರಸ್ತೆಯ ಟೋಲ್ ‍ಗೇಟ್ ಗೆ ಆಗಮಿಸುತ್ತಿದ್ದು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾಗತಿಸಲಾಗುವುದು. ಅಲ್ಲಿಂದ ಜ್ಯೋತಿಯ ಮೆರವಣಿಗೆಯನ್ನು ಕೋಟೆ ಆಂಜನೇಯ ದೇವಸ್ಥಾನ ತಲುಪುವುದು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸ್ವಾಗತಿಸುವರು, ಸಚಿವ ತನ್ವೀರ್ ಸೇಠ್, ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು ಹೆಚ್.ಪಿ.ಮಂಜುನಾಥ್, ಕೆ.ವೆಂಕಟೇಶ್, ಕಳಲೆ ಕೇಶವಮೂರ್ತಿ, ಸರ್ಕಾರದ ವಿವಿದ ನಿಗಮ ಮಂಡಳಿ ನಾಮ ನಿರ್ದೇಶಿತ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: